ಮೈಸೂರು

ಜೀವ ಉಳಿಸಲು ಸಕಾಲದಲ್ಲಿ ರಕ್ತ ದೊರೆಯುವಂತೆ ಮಾಡಬೇಕು : ಶಾಸಕ ಜಿ ಟಿ ದೇವೇಗೌಡ

ಮೈಸೂರು,ಜ.27:- ಸಕಾಲದಲ್ಲಿ ರಕ್ತ ದೊರಕದೆ ಎಷ್ಟೋ ಜನರು ಪ್ರಾಣವನ್ನೇ ಬಿಟ್ಟಿದ್ದಾರೆ. ಅದರಿಂದ ಜೀವ ಉಳಿಸಲು ಸಕಾಲದಲ್ಲಿ ರಕ್ತ ದೊರೆಯುವಂತೆ ಮಾಡಬೇಕು ಎಂದು ಶಾಸಕ ಜಿ ಟಿ ದೇವೇಗೌಡ ಸಲಹೆ ನೀಡಿದರು.
ಲಯನ್ಸ್ ಸಂಸ್ಥೆ ಮೈಸೂರು ಜೀವಧಾರ ಸೇವಾ ಟ್ರಸ್ಟ್ ನಿಂದ ನಗರದ ಸಯ್ಯಾಜಿರಾವ್ ರಸ್ತೆಯಲ್ಲಿ ಸ್ಥಾಪಿಸಲಾಗಿರುವ ಲಯನ್ಸ್ ರಕ್ತ ನಿಧಿ ಜೀವದಾನ ಕೇಂದ್ರ ಉದ್ಘಾಟನಾ ಸಮಾರಂಭ ಉದ್ಘಾಟಿಸಿ ಮಾತನಾಡಿದರು. ನೀರು ಹರಿಯುತ್ತಿದ್ದರೆ ಹೇಗೆ ಶುದ್ಧವೋ ಹಾಗೆಯೇ ರಕ್ತ ಸದಾ ಚಲನಶೀಲವಾಗಿದ್ದರೆ ಮನುಷ್ಯ ಆರೋಗ್ಯ ಪೂರ್ಣವಾಗಿರುತ್ತಾನೆ. ಅನಾರೋಗ್ಯ, ಅಪಘಾತದ ಸಮಯದಲ್ಲಿ ಅಗತ್ಯಕ್ಕಿಂತ ಕಡಿಮೆ ರಕ್ತ ಇದ್ದಾಗ ತೊಂದರೆಗೆ ಒಳಗಾಗುತ್ತಾನೆ. ಎಷ್ಟೋ ಪ್ರಕರಣಗಳಲ್ಲಿ ಸಕಾಲಕ್ಕೆ ರಕ್ತ ದೊರೆಯದೆ ಮೃತಪಟ್ಟಿದ್ದೂ ಇದೆ .ಆದ್ದರಿಂದ ಸಾರ್ವಜನಿಕರು ರಕ್ತದಾನ ಮಾಡಲು ಮುಂದೆ ಬರಬೇಕು. ರಕ್ತನಿಧಿ ಕೇಂದ್ರಗಳು ಅಗತ್ಯ ಇರುವವರಿಗೆ ರಕ್ತ ನೀಡಲು ಕ್ರಮ ಕೈಗೊಳ್ಳಬೇಕು ಎಂದು ಹೇಳಿದರು.
ಡಾ.ಜಿ ಎ ರಮೇಶ್ ಗೌಡ ಮಾತನಾಡಿ ಲಯನ್ಸ್ ಅಂತರರಾಷ್ಟ್ರೀಯ ಸಂಸ್ಥೆ ವಿಶ್ವದಲ್ಲಿಯೇ ಗುರುತಿಸಿಕೊಂಡಿರುವ ಮಹಾನ್ ಸಂಸ್ಥೆಯಾಗಿದೆ. ಈ ಸಂಸ್ಥೆಯ ಮುಖ್ಯ ಗುರಿ ಯಾವುದೇ ಅಪೇಕ್ಷೆಯಿಲ್ಲದೆ ಜನರಿಗಾಗಿ ನಿಸ್ವಾರ್ಥ ಪರೋಪಕಾರದ ಸೇವೆ ಮಾಡುವುದಾಗಿದೆ . ಬೆಂಗಳೂರಿನಲ್ಲಿ ಸೀಮಿತವಾಗಿದ್ದ ಲಯನ್ಸ್ ರಕ್ತದಾನ ಕೇಂದ್ರಗಳು ಇದೀಗ ಸಾಂಸ್ಕೃತಿಕ ರಾಜಧಾನಿ ಮೈಸೂರಿನಲ್ಲಿ ಪ್ರಾರಂಭವಾಗಿರುವುದು ಲಕ್ಷಾಂತರ ಮಂದಿಗೆ ಆರೋಗ್ಯದ ಕಷ್ಟಕಾಲದಲ್ಲಿ ಸಹಕಾರಿಯಾಗಲಿದೆ. ರಕ್ತದಾನ ಮಾಡುವುದರಿಂದ ನಮ್ಮ ಆರೋಗ್ಯವನ್ನು ಸಮತೋಲನದಿಂದ ಕಾಪಾಡಿಕೊಳ್ಳಬಹುದು ಎಂದರು.
ಹುಣಸೂರು ಶಾಸಕ ಹೆಚ್ ಪಿ ಮಂಜುನಾಥ್ ಮಾತನಾಡಿ ಆಧುನಿಕ ದಿನಗಳಲ್ಲಿ ಎಲ್ಲದಕ್ಕೂ ಪರ್ಯಾಯ ಸಂಶೋಧನೆ ಮಾಡಲಾಗುತ್ತಿದೆ. ರಕ್ತಕ್ಕೆ ಇದುವರೆವಿಗೂ ಪರ್ಯಾಯ ಕಂಡುಹಿಡಿಯಲು ಸಾಧ್ಯವಾಗಿಲ್ಲ. ಹಾಗಾಗಿ ರಕ್ತ ಅಮೂಲ್ಯವಾಗಿದ್ದು ಅದನ್ನು ಅಗತ್ಯ ಇರುವವರಿಗೆ ದಾನ ಮಾಡ ಬೇಕು ಎಂದರು .
ಕಾರ್ಯಕ್ರಮದಲ್ಲಿ ವಿ. ವಿಜಯ್ ಕುಮಾರ್ ರಾಜು ,ಡಾ ನಾಗರಾಜ್ ಭೇರ್ಯ ,ಲಯನ್ಸ್ ರಕ್ತ ನಿಧಿ ಜೀವಧಾರ ಕೇಂದ್ರದ ಅಧ್ಯಕ್ಷರಾದ ಗಿರೀಶ್ ,ನಿರ್ದೇಶಕರಾದ ಮುತ್ತಣ್ಣ ಸಿ ಜಿ ,ವಸ್ತು ಪ್ರದರ್ಶನ ಪ್ರಾಧಿಕಾರ ಅಧ್ಯಕ್ಷರಾದ ಹೇಮಂತ್ ಕುಮಾರ್ ಗೌಡ ,ಮೈಮುಲ್ ನಿರ್ದೇಶಕರಾದ ಅಶೋಕ್ ,ಮುಡಾ ಸದಸ್ಯರಾದ ಲಕ್ಷ್ಮೀದೇವಿ ,ನಗರಪಾಲಿಕೆ ಸದಸ್ಯರಾದ ರಮಣಿ ,ಬಿ ವಿ ಮಂಜುನಾಥ್ , ಡಾ.ಪ್ರಭಾ ಮೂರ್ತಿ ,ಡಾ. ಶ್ರೀವಿದ್ಯಾ ,ಎಂ ಎ ಶ್ರೀನಾಥ್ ,ಎಂ ಎನ್ ನಿತ್ಯಾನಂದ ,ಎಚ್ ಎನ್ ಶಿವನಂಜಯ್ಯ ,ಕೆ ಎನ್ ದೇವಪ್ರಸಾದ್ ,ಸುಧೀರ್ ಧರ್ಮಾ ,ರಾಧಾ ಇನ್ನಿತರರು ಹಾಜರಿದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: