ದೇಶಪ್ರಮುಖ ಸುದ್ದಿ

ಗಂಡನ ಸಂಬಂಧಿಕರನ್ನು ಭೇಟಿ ಮಾಡಲು ಪಾಕ್ ಗೆ ತೆರಳಿದ್ದ ಹಸೀನಾ ಬೇಗಂ ಭಾರತಕ್ಕೆ ವಾಪಸ್ : 18 ವರ್ಷಗಳ ಕಾಲ ಜೈಲಿನಲ್ಲಿ

ದೇಶ(ನವದೆಹಲಿ)ಜ.28:- 18 ವರ್ಷಗಳ ಕಾಲ ಪಾಕಿಸ್ತಾನದಲ್ಲಿ ಜೈಲಿನಲ್ಲಿದ್ದ ಜೌರಂಗಾಬಾದ್‌ ನ ಹಸೀನಾ ಬೇಗಂ ಭಾರತಕ್ಕೆ ಮರಳಿದ್ದಾರೆ.
65 ವರ್ಷದ ಹಸೀನಾ ಬೇಗಂ 18 ವರ್ಷಗಳ ಹಿಂದೆ ತನ್ನ ಗಂಡನ ಸಂಬಂಧಿಕರನ್ನು ಭೇಟಿ ಮಾಡಲು ಪಾಕಿಸ್ತಾನಕ್ಕೆ ಹೋಗಿದ್ದರು. ಆದರೆ ಪಾಸ್ಪೋರ್ಟ್ ಕಳೆದುಕೊಂಡಿದ್ದರಿಂದ ಅವರಿಗೆ ಭಾರತಕ್ಕೆ ಮರಳಲು ಸಾಧ್ಯವಾಗಲಿಲ್ಲ. ಅವರನ್ನು ಪಾಕಿಸ್ತಾನ ಜೈಲಿನಲ್ಲಿ ಬಂಧಿಸಲಾಯಿತು. ಅವರು ಮಂಗಳವಾರ (ಜನವರಿ 26) ಭಾರತಕ್ಕೆ ಮರಳಿದ್ದಾರೆ.
ಮರಳಿದ ಹಸೀನಾ ಬೇಗಂ ರನ್ನು ಅವರ ಸಂಬಂಧಿಕರು, ಪೊಲೀಸ್ ಅಧಿಕಾರಿಗಳು ಸ್ವಾಗತಿಸಿದರು. ಈ ಸಂದರ್ಭ ಮಾತನಾಡಿರುವ ಹಸೀನಾ ಬೇಗಂ “ನಾನು ಅನೇಕ ತೊಂದರೆಗಳನ್ನು ಎದುರಿಸಿದ್ದೇನೆ, ಈಗ ನಾನು ಮನೆಗೆ ಮರಳಿದ್ದೇನೆ, ನನಗೀಗ ಸಮಾಧಾನವಿದೆ. ನಾನು ಸ್ವರ್ಗದಲ್ಲಿದ್ದೇನೆ ಎಂದು ನನಗೆ ಅನಿಸುತ್ತದೆ. ನನ್ನನ್ನು ಬಲವಂತವಾಗಿ ಪಾಕಿಸ್ತಾನದಲ್ಲಿ ಜೈಲಿನಲ್ಲಿಡಲಾಗಿತ್ತು. ಈ ಪ್ರಕರಣದ ವರದಿ ಸಿದ್ಧಪಡಿಸಿದ ಔರಂಗಾಬಾದ್ ಪೊಲೀಸರಿಗೆ ಧನ್ಯವಾದ ಹೇಳುತ್ತೇನೆ” ಎಂದಿದ್ದಾರೆ.
ಹಸೀನಾ ಬೇಗಂ ಅವರ ಸಂಬಂಧಿ ಖ್ವಾಜಾ ಜೈನುದ್ದೀನ್ ಚಿಶ್ತಿ ಅವರು ಭಾರತಕ್ಕೆ ಮರಳಲು ಸಹಾಯ ಮಾಡಿದ್ದಕ್ಕಾಗಿ ಔರಂಗಾಬಾದ್ ಪೊಲೀಸರಿಗೆ ಧನ್ಯವಾದ ಅರ್ಪಿಸಿದರು. (ಏಜೆನ್ಸೀಸ್,ಎಸ್.ಎಚ್)

Leave a Reply

comments

Related Articles

error: