ಮೈಸೂರು

ಜಲಸಂಗ್ರಹಾಗಾರದ ಕಾಮಗಾರಿ ನಾಲ್ಕು ತಿಂಗಳಲ್ಲಿ ಪೂರ್ಣ : ಶಾಸಕ ಸೋಮಶೇಖರ್

ಮೈಸೂರಿನ ವಾರ್ಡ್ ನಂ 11 ರ  ಬಳಿ ನೂತನವಾಗಿ ನಿರ್ಮಿಸಲಾಗುವ  10 ಲಕ್ಷ ಲೀಟರ್ ಸಾಮರ್ಥ್ಯದ ಮೇಲ್ಮಟ್ಟದ ಜಲಸಂಗ್ರಾಹಾಗಾರ ಕಾಮಗಾರಿಗೆ  ಸೋಮವಾರ ಗುದ್ದಲಿಪೂಜೆ ನೆರವೇರಿಸಲಾಯಿತು.

ವಿಶ್ವೇಶ್ವರನಗರದ ಬಡಾವಣೆಯಲ್ಲಿ  ನೂತನವಾಗಿ ನಿರ್ಮಿಸುವ ಜಲಸಂಗ್ರಹಾಗಾರಕ್ಕೆ ಶಾಸಕ ಎಂ.ಕೆ.ಸೋಮಶೇಖರ್ ಗುದ್ದಲಿಪೂಜೆ ನೆರವೇರಿಸಿದರು. ಬಳಿಕ ಮಾತನಾಡಿದ ಅವರು ಈ ವಾರ್ಡಿನಲ್ಲಿ ಕುಡಿಯುವ ನೀರಿನ ಟ್ಯಾಂಕರ್ ಶಿಥಿಲಗೊಂಡಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯನವರ ಆಯವ್ಯಯದ ಶೀರ್ಷಿಕೆಯಡಿಯಲ್ಲಿ 100 ಕೋಟಿ ವಿಶೇಷ ಅನುದಾನದಡಿಯಲ್ಲಿ ವಾರ್ಡ್ ನಂ 11 ರ ಹತ್ತಿರ 10 ಲಕ್ಷ ಲೀಟರ್ ಸಾಮರ್ಥ್ಯ ಮೇಲ್ಮಟ್ಟದ ಜಲಸಂಗ್ರಾಹಗಾರವನ್ನು  ನಿರ್ಮಿಸಲಾಗುತ್ತಿದೆ. ಇಲ್ಲಿನ ಜನರಿಗೆ ಅನುಕೂಲವಾಗಲೆಂದು ಇದನ್ನು ನಿರ್ಮಿಸಲಾಗುತ್ತಿದೆ. ಇನ್ನೂ 4 ತಿಂಗಳ ಅವಧಿಯಲ್ಲಿ ಈ ಕಾಮಗಾರಿ ಪೂರ್ಣಗೊಳ್ಳಲಿದೆ ಎಂದರು.

ಈ ಸಂದರ್ಭ  ಪಾಲಿಕೆ ಸದಸ್ಯ ಉಮಾಮಣಿ ಸೇರಿದಂತೆ ಹಲವರು ಉಪಸ್ಥಿತರಿದ್ದರು. (ಕೆ.ಎಸ್-ಎಸ್.ಎಚ್)

Leave a Reply

comments

Related Articles

error: