ಮೈಸೂರು

ಎಸ್ ಸಿಎಂಐಎಂಡಿಯ ಪಿಜಿಸಿಎಂ ಘಟಿಕೋತ್ಸವದಲ್ಲಿ 11 ವಿದ್ಯಾರ್ಥಿಗಳಿಗೆ ಪದವಿ ಪ್ರದಾನ

ಮೈಸೂರು,ಜ.28- ಎಸ್ ಸಿಎಂಐಎಂಡಿಯ ಪಿಜಿಸಿಎಂ ಕಾರ್ಯಕ್ರಮದ ಮೊದಲ ವಾರ್ಷಿಕ ಘಟಿಕೋತ್ಸವದಲ್ಲಿ 11 ಮಂದಿ ವಿದ್ಯಾರ್ಥಿಗಳಿಗೆ ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಮತ್ತು ಎಸ್ ಸಿಎಂಐಎಂಡಿ ಅಧ್ಯಕ್ಷರಾದ ಡಾ.ಡಿ.ವೀರೇಂದ್ರ ಹೆಗ್ಗಡೆ ಪದವಿ ಪ್ರದಾನ ಮಾಡಿದರು.

ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಇನ್ ಸ್ಟಿಟ್ಯೂಟ್ ಮ್ಯಾನೇಜ್ ಮೆಂಟ್ ಡೆವಲಪ್ಮೆಂಟ್ (ಎಸ್ ಸಿಎಂಐಎಂಡಿ) ಸ೦ಸ್ಥೆಯವರು ಅಖಿಲ ಭಾರತ ತಾಂತ್ರಿಕ ಶಿಕ್ಷಣ ಮಂಡಳಿಯಿ೦ದ (ಎಐಸಿಟಿಇ) ಅನುಮೋದಿತ ಒಂದು ವರ್ಷ ಪೂರ್ಣ- ಅವಧಿಯ ಸ್ನಾತಕೋತ್ತರ ಪ್ರಮಾಣ ಪತ್ರ (ಪಿಜಿಸಿಎಂ) ಕಾರ್ಯಕ್ರಮದ ಮೊದಲ ವಾರ್ಷಿಕ ಘಟಿಕೋತ್ಸವವನ್ನು ವರ್ಚುಯಲ್ ಮೂಲಕ ಆಯೋಜಿಸಲಾಗಿತ್ತು.

ಕಾರ್ಯಕ್ರಮದಲ್ಲಿ ಎಐಸಿಟಿಇ ಅನುಮೋದಿತ  2020-2021 ಬ್ಯಾಚ್ನ 11 ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರವನ್ನು ನೀಡಿದರು. ಭಾರ್ಗವ್ ಉಪಾಧ್ಯಾಯ ಅವರಿಗೆ ಒಟ್ಟಾರೆ ಅತ್ಯುತ್ತಮ ಸಾಧನೆಗಾಗಿ ಚಿನ್ನದ ಪದಕವನ್ನು ನೀಡಿ ಗೌರವಿಸಿದರು.

ಭಾರ್ಗವ್ ಅವರೊಂದಿಗೆ ಅಲ್ಮೆನ್ ಜಾವೇದ್, ಅನುಷ್, ಕ್ಲಿಫರ್ಡ್, ದೀಕ್ಷಿತ್, ದೃಶ್ಯ, ಸಂತೋಷ್ ಕುಮಾರ್, ಅರುಣ್ ವರ್ಮ, ನವನೀತ್, ಪುಷ್ಕರಾಜ್, ಸಾಗರ್ ಜೆವೂರ್ ಅವರಿಗೆ ಪದವಿ ಪ್ರದಾನ ಮಾಡಲಾಯಿತು.

ಬಳಿಕ ಮಾತನಾಡಿದ ಹೆಗ್ಗಡೆ ಅವರು, ವಿದ್ಯಾರ್ಥಿಗಳು ಸ್ವಂತ ಉದ್ಯಮಗಳಲ್ಲಿ ಉತ್ತಮ ಸಾಧನೆ ತೋರಬೇಕು. ಏಕಕಾಲದಲ್ಲಿ ಭಾರತೀಯ ಮೌಲ್ಯಗಳು ಮತ್ತು ನೀತಿಗಳನ್ನು ಹಿಡಿದಿಟ್ಟುಕೊಳ್ಳಬೇಕು. ಹೊಸ ಶಿಕ್ಷಣ ನೀತಿ (ಎನ್ ಇಪಿ) ಹಲವಾರು ಮೂಲ ಸಿದ್ಧಾ೦ತಗಳನ್ನು ಹೊಂದಿದೆ. ಇದನ್ನು ಧರ್ಮಸ್ಥಳ ಸಂಸ್ಥೆಗಳ ಸಮೂಹ ಅನುಸರಿಸುತ್ತಾ ಬ೦ದಿದೆ. ಸಮಗ್ರತೆ, ಪೂಜ್ಯತೆ, ಕೃತಜ್ಞತೆ ಮತ್ತು ಸಾಮಾಜಿಕ ಹೊಣೆಗಾರಿಕೆಗಾಗಿ ಭಾರತೀಯ ಮೌಲ್ಯಗಳು ಮತ್ತು ಭಾರತೀಯ ಮನೋಭಾವವನ್ನು ಎತ್ತಿಹಿಡಿಯುವ ಶಿಕ್ಷಣ ವ್ಯವಸ್ಥೆಯ ಬಗ್ಗೆ ಅವರು ಒತ್ತಿ ಹೇಳಿದರು.

‘ಯುವ ವ್ಯವಸ್ಥಾಪಕರು ಸಫಲತೆಯ ಜೀವನವನ್ನು ನಡೆಸುವಲ್ಲಿ ಮನೋಧರ್ಮದ ಚೌಕಟ್ಟನ್ನು ಹೊಂದಿರಬೇಕು ಮತ್ತು ಅದೇ ಸಮಯದಲ್ಲಿ ಅವರ ಔದ್ಯೋಗಿಕ ಜೀವನದಲ್ಲಿ ಯಶಸ್ವಿಯಾಗಬೇಕು ಎಂದರು.

ಚಿನ್ನದ ಪದಕ ವಿಜೇತ ಭಾರ್ಗವ್ ಅವರು, ನನ್ನ ವೃತ್ತಿಪರ ಜೀವನದ ಪ್ರತಿಯೊಂದು ಹಂತದಲ್ಲೂ ಎಸ್ಡಿಎಂಐಎಂಡಿ ನನಗೆ ಸಹಾಯ ಮಾಡಿದೆ. ವೃತ್ತಿ ಜೀವನದ ಆಸಕ್ತಿಯಲ್ಲಿ ಉತ್ತಮ ಸಾಧನೆ ಮಾಡಲು ಸಂಸ್ಥೆ ನನಗೆ ಉತ್ತಮ ವೇದಿಕೆ ಮತ್ತು ಮೂಲಸೌಕರ್ಯಗಳನ್ನು ಒದಗಿಸಿತು. ತಜ್ಞ ಅಧ್ಯಾಪಕರು ನನ್ನನ್ನು ಉದ್ಯಮಕ್ಕೆ ಸಿದ್ಧಪಡಿಸಿದರು, ಆದರೆ ಉದ್ಯೋಗ ತರಬೇತಿ ನನ್ನ ಮೃದು ಕೌಶಲ್ಯಗಳನ್ನು ಹೆಚ್ಚಿಸಲು ಸಹಾಯ ಮಾಡಿತು ಎಂದರು.

ಕಳೆದ ವರ್ಷದಲ್ಲಿ ಸಂಸ್ಥೆಯ ಚಟುವಟಿಕೆಗಳು ಮತ್ತು ಸಾಧನೆಗಳನ್ನು ಎತ್ತಿ ತೋರಿಸುವ ಸಂಕ್ಷಿಪ್ತ ವರದಿಯನ್ನು, ಸಂಸ್ಥೆಯ ನಿರ್ದೇಶಕ ಡಾ.ಎನ್.ಆರ್. ಪರಶುರಾಮನ್ ಮಂಡಿಸಿದರು.

ಸ೦ಸ್ಥೆಯ  ಉಪನಿರ್ದೇಶಕರು ಹಾಗೂ ಪಿಜಿಸಿಎಂ ಕಾರ್ಯಕ್ರಮದ  ಅಧ್ಯಕ್ಷರಾದ ಡಾ.ಎಚ್. ಗಾಯತ್ರಿ ಸ್ವಾಗತ ಭಾಷಣ ಮಾಡಿದರು ಮತ್ತು ಪ್ರಮಾಣ ಪತ್ರಗಳ ವಿತರಣೆಗಾಗಿ ವಿದ್ಯಾರ್ಥಿಗಳನ್ನು ಪ್ರಸ್ತುತ ಪಡಿಸಿದರು. (ಎಂ.ಎನ್)

Leave a Reply

comments

Related Articles

error: