ಮೈಸೂರು

ಸ್ನೇಹಿತರೊಂದಿಗೆ ಸೇರದಂತೆ ತಿಳಿಸಿದ್ದ ಹಿನ್ನೆಲೆ ಯುವಕ ಆತ್ಮಹತ್ಯೆ

ಮೈಸೂರು,.ಜ.29:- ಸ್ನೇಹಿತರೊಂದಿಗೆ ಸೇರದಂತೆ ಮನೆಯವರು ಕಟ್ಟುನಿಟ್ಟಾಗಿ ತಿಳಿಸಿದ್ದ ಹಿನ್ನೆಲೆಯಲ್ಲಿ ಮನನೊಂದ ಯುವಕನೋರ್ವ ನೇಣಿಗೆ ಶರಣಾದ ಘಟನೆ ಜೆ.ಪಿ.ನಗರದಲ್ಲಿ ನಡೆದಿದೆ.
ಮೃತ ಯುವಕನನ್ನು ಜೆಪಿ ನಗರದ ನಿವಾಸಿ ಯೋಗೇಶ್(20)ಎಂದು ಗುರುತಿಸಲಾಗಿದೆ. ಪಿಯುಸಿಗೆ ಓದನ್ನು ನಿಲ್ಲಿಸಿದ್ದ ಈತ ಹೆಚ್ಚಾಗಿ ಸ್ನೇಹಿತರೊಂದಿಗೆ ಸೇರಿರುತ್ತಿದ್ದ, ಸ್ನೇಹಿತರೊಂದಿಗೆ ಹೆಚ್ಚು ಸೇರಬಾರದೆಂದು ಮನೆಯಲ್ಲಿ ಕಟ್ಟುನಿಟ್ಟಾಗಿ ತಿಳಿದಿದ್ದರು ಎನ್ನಲಾಗಿದೆ. ಬುಧವಾರ ಮಧ್ಯಾಹ್ನ ಬಯೋಡೇಟಾ ಪ್ರಿಂಟ್ ತೆಗೆಸಬೇಕೆಂದು ಮನೆಯಿಂದ ಹೊರ ಬಂದಿದ್ದ ಯುವಕ ಅದೇ ಬಡಾವಣೆಯಲ್ಲಿರುವ ತಮ್ಮದೇ ಮತ್ತೊಂದು ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ ಎನ್ನಲಾಗಿದೆ.
ವಿದ್ಯಾರಣ್ಯಪುರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: