ಮೈಸೂರು

ಪಾದಚಾರಿಗೆ ಬೈಕ್ ಡಿಕ್ಕಿ : ಸಾವು

ರಸ್ತೆಯ ಬದಿಯಲ್ಲಿ  ನಡೆದುಕೊಂಡು ಹೋಗುತ್ತಿದ್ದ ಪಾದಚಾರಿ ವ್ಯಕ್ತಿಯೋರ್ವರಿಗೆ ವೇಗವಾಗಿ ಬಂದ ಬೈಕ್ ಸವಾರನೋರ್ವ ಗುದ್ದಿದ ಪರಿಣಾಮ ಅವರು ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಮೈಸೂರಿನಲ್ಲಿ ನಡೆದಿದೆ.

ಮೃತನನ್ನು ನಂಜನಗೂಡು ಮೂಲದ ಬಸವಯ್ಯ (60) ಎಂದು ಗುರುತಿಸಲಾಗಿದೆ. ಮೈಸೂರಿನ ಮೇಟಗಳ್ಳಿಯ ಮುಖ್ಯರಸ್ತೆಯಲ್ಲಿ ನಡೆದುಕೊಂಡು ಬರುತ್ತಿರುವಾಗ ಈ ದುರ್ಘಟನೆ ಸಂಭವಿಸಿದೆ. ಮೇಟಗಳ್ಳಿಯ ಜೆ.ಜೆ.ಬಡಾವಣೆಯಲ್ಲಿರುವ ತಮ್ಮ ಮಗನ ಮನೆಗೆ ಬಸವಯ್ಯ ಹೊರಟಿದ್ದಾಗ ಟಿವಿಎಸ್ ವಿಕ್ಟರ್ ಬೈಕ್ ನಲ್ಲಿ ಬಂದ ಸವಾರ ಇವರಿಗೆ ಬಲವಾಗಿ ಗುದ್ದಿದ್ದಾನೆ. ಗುದ್ದಿದ ರಭಸಕ್ಕೆ ಬಸವಯ್ಯನವರ ತಲೆಗೆ ಗಂಭೀರತರಹದ ಏಟುಗಳಾಗಿದ್ದು,  ವಿಪರೀತ ರಕ್ತಸ್ರಾವವಾಗಿದೆ. ಅವರು ಸ್ಥಳದಲ್ಲಿಯೇ ಅಸುನೀಗಿದ್ದಾರೆ.

ಸ್ಥಳಕ್ಕೆ ವಿವಿಪುರಂ ಪೊಲೀಸರು ಭೇಟಿ ನೀಡಿದ್ದು, ಪರಿಶೀಲನೆ ನಡೆಸಿದ್ದಾರೆ. ವಿವಿಪುರಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. (ಕೆ.ಎಸ್-ಎಸ್.ಎಚ್)

Leave a Reply

comments

Related Articles

error: