ನಮ್ಮೂರುಪ್ರಮುಖ ಸುದ್ದಿಮೈಸೂರು

ಸ್ಟಾಕ್ ಎಕ್ಸ್ಚೇಂಜ್ ಕಂಪನಿಯಿಂದ ಗ್ರಾಹಕರಿಗೆ ವಂಚನೆ : ಬಂಧನ ಆರೋಪಿ ನ್ಯಾಯಾಲಯದ ವಶಕ್ಕೆ

ವಿವಿ.ಪುರಂ: ನಿಮಿಷಾಂಭ ಇನ್ವೆಷ್ಟಮೆಂಟ್ ಹಾಗೂ ಲ್ಯಾಂಡ್ ಡೆವಲಪ್ಮೆಂಟ್ ಮತ್ತು ಸ್ಟಾಕ್ ಎಕ್ಸ್ಚೇಂಜ್ ಕಂಪನಿಯ ಮಾಲೀಕ ಜಯರಾಮ್ (38)  ಗ್ರಾಹಕರಿಗೆ ಮೋಸ ಮಾಡಿ ಕಂಪನಿಯ ಕೊಟ್ಯಾಂತರ ರೂಪಾಯಿ ಹಣದೊಂದಿಗೆ ಪರಾರಿಯಾಗಿ ಕಳೆದ ಆರು ತಿಂಗಳಿನಿಂದ ತಲೆ ಮರೆಸಿಕೊಂಡಿದ್ದ, ಈ ಬಗ್ಗೆ ದೂರು ದಾಖಲಾದ ಹಿನ್ನಲೆಯಲ್ಲಿ ನಗರದ ವಿವಿಪುರಂ ಪೊಲೀಸ್ ಹಾಗೂ ನಗರ ಪೊಲೀಸರು ಜಂಟಿಯಾಗಿ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸಿ ನ್ಯಾಯಾಂಗ ವಶಕ್ಕೆ ಒಪ್ಪಿಸಿದ್ದಾರೆ.

ಕಳೆದ ಆರು ತಿಂಗಳಿನಿಂದ ತಲೆ ಮರೆಸಿಕೊಂಡಿದ್ದ  ಜಯರಾಮ್ ಸಾವಿರಾರು ಗ್ರಾಹಕರು ಕಂಪನಿಯಲ್ಲಿ ಹೂಡಿದ್ದ ಹಣವನ್ನು ಲಪಟಾಯಿಸಿ ಪರಾರಿಯಾಗಿದ್ದ, ಈ  ವಂಚನೆ ದೂರನ್ನು ದಾಖಲಿಸಲು ಪೊಲೀಸರು ನಿರಾಕರಿಸಿದ್ದರು, ಈ ಬಗ್ಗೆ ಸಾರ್ವಜನಿಕರು ನ್ಯಾಯಾಲಯದ ಮೆಟ್ಟಿಲೇರಿದರು.  ಕೂಲಂಕುಷವಾಗಿ ಪರಿಶೀಲನೆ ನಡೆಸಿದ ನ್ಯಾಯಾಲಯ ತನಿಖೆ ನಡೆಸುವಂತೆ ಠಾಣೆಗಳಿಗೆ ಆದೇಶ ನೀಡಿದ ನಂತರ ಆಶೋಕಪುರಂ ಮತ್ತು ಕುವೆಂಪು ನಗರದ ಪೊಲೀಸರು ದೂರು ದಾಖಲಿಸಿಕೊಂಡು ಕಾರ್ಯಪ್ರವೃತರಾದರು.

ಗ್ರಾಹಕರು ನಿಮಿಷಾಂಭ ಸಂಸ್ಥೆಯ ಸಾಲ ಕರಾರುಪತ್ರ ಮತ್ತು ಚೆಕ್ ಗಳನ್ನು ಕೋರ್ಟಿಗೆ ಸಾಕ್ಷಿಯಾಧಾರವಾಗಿ ನೀಡಿದ ನಂತರ ನ್ಯಾಯಾಲಯವು ದೂರ ದಾಖಲಿಸಲು ಅನುಮತಿ ನೀಡಿದ್ದು ಕಂಪನಿಯ ವಿರುದ್ಧ ಕುವೆಂಪುನಗರ ಹಾಗೂ ಆಶೋಕಪುರಂ ಪೊಲೀಸ್ ಠಾಣೆಗಳಲ್ಲಿ ಆರು ದೂರುಗಳು ದಾಖಲಾಗಿವೆ. ಆರೋಪಿಯು ಬೆಂಗಳೂರಿನಲ್ಲಿ ತಲೆಮರೆಸಿಕೊಂಡಿರುವ ಬಗ್ಗೆ ಸುಳಿವು ಹಿನ್ನಲೆಯಲ್ಲಿ ಬೆಂಗಳೂರು ಸಿಸಿಬಿ ಪೊಲೀಸರು ಮತ್ತು ಮೈಸೂರು ನಗರ ಪೊಲೀಸರು ಜಂಟಿಯಾಗಿ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸಲು ಯಶಸ್ವಿಯಾಗಿದ್ದು ಆತನನ್ನು ನ್ಯಾಯಾಂಗದ ವಶಕ್ಕೆ ಒಪ್ಪಿಸಲಾಗಿದೆ.

Leave a Reply

comments

Related Articles

error: