ಮೈಸೂರು

ವೃದ್ಧರಿಂದ ರಾಜ್ ಕುಮಾರ ಚಿತ್ರ ವೀಕ್ಷಣೆ

ಮೈಸೂರಿನ ಛಾಯಾದೇವಿ ಅನಾಥಾಶ್ರಮ ಮತ್ತು ವೃದ್ಧಾಶ್ರಮದ ಸುಮಾರು 30ಕ್ಕೂ ಹೆಚ್ಚಿನ ವೃದ್ಧರಿಗೆ ಮಲ್ಟಿಪ್ಲೆಕ್ಸ್ ಚಿತ್ರಮಂದಿರ ಡಿಆರ್ ಸಿಯಲ್ಲಿ ಸೋಮವಾರ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅಭಿನಯದ ರಾಜ್ ಕುಮಾರ ಚಿತ್ರವನ್ನು ತೋರಿಸಲಾಯಿತು.

ವೃದ್ಧರು ಖುಷಿಯಿಂದ ಚಿತ್ರವನ್ನು ವೀಕ್ಷಿಸಿದರಲ್ಲದೇ ಇಂತಹ ಚಿತ್ರಮಂದಿರವನ್ನು ನೋಡುತ್ತಿರುವುದು ಇದೇ ಮೊದಲು. ಹವಾನಿಯಂತ್ರಿತ ಚಿತ್ರಮಂದಿರವನ್ನು ನೋಡಿಯೇ ಇರಲಿಲ್ಲ. ಮೈಸೂರಿನಲ್ಲಿ ಇಂಥಹ ಚಿತ್ರಮಂದಿರಗಳು ಬಂದು ಹಲವು ವರ್ಷಗಳಾದ ನಂತರ ನಮಗೆ ಇಂದು ಇಂಥಹ ಚಿತ್ರಮಂದಿರವನ್ನು ನೋಡುವ ಭಾಗ್ಯ ಲಭಿಸಿತು ಎಂದರು. ಚಿತ್ರ ತುಂಬಾ ಚೆನ್ನಾಗಿದೆ. ರಾಜಕುಮಾರ್ ಮಕ್ಕಳು ಅಪ್ಪನ ರೀತಿಯಲ್ಲಿಯೇ ಅಭಿನಯಿಸುತ್ತಿದ್ದು, ಕುಟುಂಬದವರೆಲ್ಲರೂ ಕೂಡಿ ಈ ಚಿತ್ರವನ್ನು ವೀಕ್ಷಿಸಬಹುದಾಗಿದೆ ಎಂದು ತಿಳಿಸಿದರು.

ಡಿಆರ್ ಸಿ ವತಿಯಿಂದ ವೃದ್ಧರಿಗೆ ಸ್ನಾಕ್ಸ್ ಗಳನ್ನು ಉಚಿತವಾಗಿ ನೀಡಲಾಯಿತು. (ಕೆ.ಸ್-ಎಸ್.ಎಚ್)

Leave a Reply

comments

Related Articles

error: