ಮೈಸೂರು

ನಂಜನಗೂಡಿನ ನಂಜುಂಡೇಶ್ವರ ದೇವಾಲಯದಲ್ಲಿ ಒಂದು ಕೋಟಿ ರೂ.ಗೂ ಹೆಚ್ಚಿನ ಕಾಣಿಕೆ ಸಂಗ್ರಹ

ಮೈಸೂರು,ಜ.30:- ದಕ್ಷಿಣ ಕಾಶಿ ನಂಜನಗೂಡಿನ ನಂಜುಂಡೇಶ್ವರ ದೇವಾಲಯದ ಕಾಣಿಕೆ ಹುಂಡಿಯಲ್ಲಿ ಎಣಿಕೆ ಕಾರ್ಯ ನಡೆಸಲಾಗಿದ್ದು, ಒಂದು ಕೋಟಿ ರೂ.ಗೂ ಹೆಚ್ಚಿನ ಕಾಣಿಕೆ ಸಂಗ್ರಹವಾಗಿದೆ.
ಒಂದು ತಿಂಗಳ ಅವಧಿಯಲ್ಲಿ 1,೦1,71,910 ರೂಪಾಯಿ ಕಾಣಿಕೆ ಹಣದ ಜೊತೆಗೆ 70 ಗ್ರಾಂ ಚಿನ್ನ, 3 ಕೆಜಿ 50 ಗ್ರಾಂ ಬೆಳ್ಳಿ ಸಂಗ್ರಹವಾಗಿದೆ. ಜೊತೆಗೆ 13 ನಿಷೇಧಿತ ನೋಟುಗಳು, 2 ವಿದೇಶಿ ಕರೆನ್ಸಿ ಕೂಡ ಕಂಡು ಬಂದಿದೆ. ಹುಂಡಿಯಲ್ಲಿ 7,500 ರೂ. ಮೌಲ್ಯದ ನಿಷೇಧಿತ ನೋಟುಗಳು ಪತ್ತೆಯಾಗಿದ್ದು, ಅದರಲ್ಲಿ 1,000 ರೂ. ಮುಖಬೆಲೆಯ 2 ನೋಟುಗಳು ಹಾಗೂ 500 ರೂ. ಮುಖಬೆಲೆಯ 11 ನಿಷೇಧಿತ ನೋಟುಗಳು ಪತ್ತೆಯಾಗಿವೆ.
ದೇವಾಲಯದ 20 ಕ್ಕೂ ಹೆಚ್ಚು ಕಾಣಿಕೆ ಹುಂಡಿಗಳಲ್ಲಿ ಎಣಿಕೆ ಕಾರ್ಯ ನಡೆಸಲಾಗಿದೆ. 50 ಕ್ಕೂ ಹೆಚ್ಚು ಸಿಬ್ಬಂದಿಗಳು ಎಣಿಕೆ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: