ಮೈಸೂರು

ಅನ್ನಭಾಗ್ಯ’ ಅಕ್ಕಿಗೆ ದರ: ಸರ್ಕಾರದ ಚಿಂತನೆ ಆಕ್ಷೇಪಿಸಿದ ಕಾಂಗ್ರೆಸ್ ಯುವ ಮುಖಂಡ

ಮೈಸೂರು,ಜ.30:- ಮಾಜಿ ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರವು ಆರಂಭಿಸಿದ್ದ ಅನ್ನಭಾಗ್ಯ ಯೋಜನೆಯಡಿ ಪಡಿತರ ಅಕ್ಕಿಗೆ ಈಗಿನ ಬಿ.ಜೆ.ಪಿ ಸರ್ಕಾರವು ದರ ವಿಧಿಸಲು ಚಿಂತಿಸುತ್ತಿದೆ. ಇದು ಖಂಡನಾರ್ಹ’ ಎಂದು ಕಾಂಗ್ರೆಸ್ ಯುವ ಮುಖಂಡ ಎನ್ ಎಂ ನವೀನ್ ಕುಮಾರ್ ಹೇಳಿದ್ದಾರೆ.
ಈ ಕುರಿತು ಮಾಧ್ಯಮ ಹೇಳಿಕೆ ನೀಡಿರುವ ಅವರು ಕಾಂಗ್ರೆಸ್ ಸರ್ಕಾರವು ಪ್ರತಿ ಫಲಾನುಭವಿಗೆ ತಲಾ ಏಳು ಕೆ.ಜಿ.ಯಂತೆ ಅಕ್ಕಿ ವಿತರಿಸಿತ್ತು. ಈ ಸಾಮಾಜಿಕ ಕಳಕಳಿಯನ್ನು ಟೀಕಿಸಿದ್ದ ಬಿ.ಜೆ.ಪಿ ಮುಖಂಡರು, ಈಗ ತಮ್ಮ ಅಧಿಕಾರಾವಧಿಯಲ್ಲಿ ಐದು ಕೆ.ಜಿ.ಗೆ ಇಳಿಕೆ ಮಾಡಿದ್ದಾರೆ. ಯಡಿಯೂರಪ್ಪ ನೇತೃತ್ವದ ಸರ್ಕಾರವು ಅನ್ನಭಾಗ್ಯ ಅಕ್ಕಿಗೆ ದರ ವಿಧಿಸಿ, ಬೊಕ್ಕಸ ತುಂಬಿಸಿಕೊಳ್ಳುವ ಹುನ್ನಾರದಲ್ಲಿದೆ. ತಜ್ಞರ ಸಮಿತಿಯು ಈ ಕುರಿತು ಶಿಫಾರಸು ನೀಡಿದೆ ಎಂದು ಹೇಳುತ್ತ ತನ್ನ ಜವಾಬ್ದಾರಿಯಿಂದ ನುಣುಚಿಕೊಳ್ಳಲು ಬಿ.ಜೆ.ಪಿ ಸರ್ಕಾರ ಯತ್ನಿಸುತ್ತಿದೆ. ಈ ಕ್ರಮವನ್ನು ಕಾಂಗ್ರೆಸ್ ಪಕ್ಷ ತೀವ್ರವಾಗಿ ಖಂಡಿಸುತ್ತದೆ. ಒಂದುವೇಳೆ ಜಾರಿಗೊಳಿಸಿದರೆ ಹೋರಾಟ ಮಾಡಲಾಗುವುದು’ ಎಂದು ಎಚ್ಚರಿಸಿದ್ದಾರೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: