
ಮೈಸೂರು
ಕಾವೇರಿ ಕ್ಯಾನ್ಸರ್ ಸೆಂಟರ್ ಗೆ ಚಾಲನೆ
ಮೈಸೂರು,ಜ.30:- ಕಾವೇರಿ ಹಾರ್ಟ್ ಅಂಡ್ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯು ಕಾವೇರಿ ಕ್ಯಾನ್ಸರ್ ಸೆಂಟರ್ ಆರಂಭಿಸಿದೆ.
ಬೆಂಗಳೂರಿನ ಕ್ಯಾನ್ಸರ್ ಸಂಶೋಧನೆ ಮತ್ತು ತರಬೇತಿ ಕೇಂದ್ರದ ನಿರ್ದೇಶಕ ಡಾ.ರಾಮಚಂದ್ರ ಕಾವೇರಿ ಕ್ಯಾನ್ಸರ್ ಸೆಂಟರ್ ಗೆ ದೀಪ ಬೆಳಗಿಸುವುದರ ಮೂಲಕ ಚಾಲನೆ ನೀಡಿದರು. ಕಾವೇರಿ ಆಸ್ಪತ್ರೆಯ ವ್ಯವಸ್ಥಾಪಕ ನಿರ್ದೇಶಕರಾದ ಡಾ.ಸರಳ ಚಂದ್ರಶೇಖರ್, ವೈದ್ಯಕೀಯ ಅಧೀಕ್ಷಕ ಡಾ.ಬಿ.ಎನ್.ರಾಜೀವ್, ಕ್ಯಾನ್ಸರ್ ಶಸ್ತ್ರ ಕ್ರಿಯಾ ಸಲಹಾ ತಜ್ಞರಾದ ಡಾ.ಎಂ.ಎಸ್.ಗಿರೀಶ್, ಡಾ.ಚಂದ್ರಶೇಖರ್ ಉದರ ದರ್ಶಕ ಶಸ್ತ್ರಕಿಯಾ ಸಲಹಾ ತಜ್ಞರಾದ ಡಾ.ಆರ್.ಎಂ.ಅರವಿಂದ್, ಸೌಲಭ್ಯ ನಿರ್ದೇಶಕರಾದ ಸಂದೀಪ್ ಪಟೇಲ್ ಸೇರಿದಂತೆ ಹಲವು ಗಣ್ಯರು ಸಮಾರಂಭದಲ್ಲಿ ಉಪಸ್ಥಿತರಿದ್ದರು. (ಕೆ.ಎಸ್,ಎಸ್.ಎಚ್)