ಮೈಸೂರು

ಕರ್ನಾಟಕ ರಾಜ್ಯ ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿಗೆ ಸೇರಿದ ಸಿ.ಎ.ನಿವೇಶನ ಪರಿವೀಕ್ಷಣೆ

ಮೈಸೂರು,ಜ .30 :- ಅರ್ಬನ್ ಹಾಥ್ ಯೋಜನೆಯಡಿ ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿಯ ವ್ಯಾಪ್ತಿಯಲ್ಲಿ ಉತ್ಪನ್ನವಾಗುವ ಹಾಗೂ ಇತರೆ ಎಲ್ಲಾ ಬಗೆಯ 200 ಪದಾರ್ಥಗಳು ಒಂದೇ ಸೂರಿನಡಿ ಮಾರಾಟ ಮಾಡಲು ವ್ಯವಸ್ಥೆ ಕಲ್ಪಿಸಲಾಗುವುದು ಎಂದು ಕರ್ನಾಟಕ ರಾಜ್ಯ ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿಯ ಅಧ್ಯಕ್ಷ ಕೃಷ್ಣಪ್ಪ ಗೌಡ ಅವರು ತಿಳಿಸಿದರು.
ಮೈಸೂರಿನ ವಿಜಯನಗರದ 3ನೇ ಹಂತದಲ್ಲಿರುವ ಕರ್ನಾಟಕ ರಾಜ್ಯ ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿಗೆ ಸೇರಿದ ಸಿ.ಎ.ನಿವೇಶನ16/ಎ, ಎ-1 ಬ್ಲಾಕ್ ಅನ್ನು ಶನಿವಾರ ಪರಿವೀಕ್ಷಣೆ ಮಾಡಿ ಮಾತನಾಡಿದರು.
ಖಾದಿ ಗ್ರಾಮೋದ್ಯೋಗ ಸಂಸ್ಥೆಗೆ 20 ವರ್ಷಗಳ ಹಿಂದೆಯೇ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಿಂದ 3750 ಚ. ಮೀ. ನಿವೇಶನ ಮಂಜೂರಾಗಿದ್ದು, ಖಾದಿ ಗ್ರಾಮೋದ್ಯೋಗದಲ್ಲಿ ಗ್ರಾಮೀಣ ಜನರು ತಯಾರಿಸುವ ಜೇನುತುಪ್ಪ, ಉಪ್ಪಿನ ಕಾಯಿ, ಬಟ್ಟೆ ಸೇರಿದಂತೆ 200 ಬಗೆಯ ಉತ್ಪನ್ನಗಳು ಒಂದೇ ಸೂರಿನಡಿ ಸಾರ್ವಜನಿಕರಿಗೆ ದೊರೆಯುವಂತೆ ಅವಕಾಶ ಮಾಡಲಾಗುವುದು ಎಂದು ಹೇಳಿದರು

ಕಟ್ಟಡ ನಿರ್ಮಿಸಲು ಅಂದಾಜು 4.19 ಕೋಟಿ ಖರ್ಚಾಗಲಿದೆ. ರಾಜ್ಯಾದ್ಯಂತ ಮಂಡಳಿಯಿಂದ ಸಾಲ ಪಡೆದ ಗ್ರಾಮೀಣ ಜನರು ತಯಾರಿಸಿದ ಎಲ್ಲಾ ರೀತಿಯ ಪದಾರ್ಥಗಳನ್ನು ಅವರೇ ಮಾರಾಟ ಮಾಡುವರು ಹಾಗೂ ಕಟ್ಟಡಕ್ಕೆ ಅವರು ಯಾವುದೇ ಬಾಡಿಗೆಯನ್ನು ಕಟ್ಟಬೇಕಾಗಿಲ್ಲ. ಗ್ರಾಮೀಣ ಜನರಿಗೆ ಉದ್ಯೋಗ ಸಿಗಬೇಕೆಂಬುದೇ ಇದರ ಪ್ರಮುಖ ಉದ್ದೇಶವಾಗಿದೆ ಎಂದರು.
ಖಾದಿ ಮಂಡಳಿಯ ಮುಖ್ಯಾಕಾರ್ಯನಿವರ್ಹಣಾಧಿಕಾರಿ ಜಯವಿಭವ ಸ್ವಾಮಿ ಅವರು ಮಾತನಾಡಿ, ರಾಜ್ಯದಲ್ಲಿ ಸುಮಾರು 157 ಖಾದಿ ಸಂಸ್ಥೆಗಳಿದ್ದು, 8000 ಸಾವಿರ ಮಂದಿ ಮಂಡಳಿಯಿಂದ ಸಹಾಯ
ಧನ ಪಡೆದು ಗುಡಿ ಕೈಗಾರಿಗಳನ್ನು ಗ್ರಾಮೀಣ ಮಟ್ಟದಲ್ಲಿ ಮಾಡುತ್ತಿದ್ದಾರೆ.
ಈ 8000 ಸಾವಿರ ಮಂದಿಯಲ್ಲಿ ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿರುವ 2000 ಮಂದಿಗೆ ಮಾರ್ಕೆಟಿಂಗ್ ಅವಶ್ಯಕತೆ ಇದ್ದು, ಅವರಿಗಾಗಿ ರಾಜ್ಯಾದ್ಯಂತ ಎಲ್ಲಾ ಜಿಲ್ಲೆಗಳಲ್ಲಿ ವರ್ಷಕ್ಕೆ 12 ವಸ್ತು ಪ್ರದರ್ಶನಗಳನ್ನು ಮಾಡಲಾಗುತ್ತದೆ ಎಂದು ತಿಳಿಸಿದರು.
ಜಿಲ್ಲಾ ಮಟ್ಟದಲ್ಲಿ ಕಚೇರಿಯನ್ನು ತೆರೆದು ಜಿಲ್ಲಾ ಮಟ್ಟದ ಅಧಿಕಾರಿಯೇ ಇದರ ಉಸ್ತುವಾರಿಯನ್ನು ನೋಡಿಕೊಳ್ಳಲಿದ್ದಾರೆ. ಕಟ್ಟಡದಲ್ಲಿ ಮಳಿಗೆಗಳನ್ನು ಕೊಳ್ಳುವವರು ಮಂಡಳಿಯಿಂದ ಸಾಲ ಪಡೆದವರಿಗೆ
ಮಾತ್ರ ಮಳಿಗೆಗಳನ್ನು ನೀಡಲಾಗುತ್ತದೆ. ಮಳಿಗೆಯಲ್ಲಿ ಖಾದಿವಸ್ತುಗಳನ್ನು ಮಾತ್ರ ಮಾರಾಟ ಮಾಡಬೇಕಾಗಿದ್ದು, ಬೇರೆ ಯಾವುದೇ ವಾಣಿಜ್ಯ ಪದಾರ್ಥಗಳನ್ನು ಮಾರಬಾರದು ಎಂದು ಹೇಳಿದರು.
80ಮಳಿಗೆ ನಿರ್ಮಾಣ ಮಾಡುವ ಯೋಜನೆ ಹೊಂದಿದೆ. ಸರ್ಕಾರಕ್ಕೆ ಈ ಯೋಜನೆಯ ಬಗ್ಗೆ ತಿಳಿಸಲಾಗುವುದು. ಕೊವೀಡ್ 19 ಹಿನ್ನೆಲೆಯಲ್ಲಿ ಸರ್ಕಾರದಿಂದ ಹಣದ ತೊಂದರೆಯಾದರೆ ಮಂಡಳಿಯಲ್ಲಿರುವ ಹಣವನ್ನೆ ಬಳಸಿಕೊಳ್ಳಲು ಸರ್ಕಾರದಿಂದ ಅನುಮತಿ ಕೇಳಲಿದ್ದೇವೆ ಎಂದರು.
ಹುಬ್ಬಳ್ಳಿ-ಧಾರವಾಡ, ಬಳ್ಳಾರಿಗಳಲ್ಲಿ ನಿವೇಶನಗಳಿದ್ದು, ಅಲೆಲ್ಲ ಕಟ್ಟಡಗಳನ್ನು ನಿರ್ಮಿಸಲಾಗುವುದು ಹಾಗೂ ಬಳ್ಳಾರಿಯಲ್ಲಿ ಖಾದಿ ಪ್ಲಾಜಾ ಮಾಡಲಾಗುವುದು. ಹಾಗೂ ಆನ್ಲೈನ್ ಮೂಲಕವೂ ಸೇವೆ ಸಿಗಲಿದೆ ಎಂದು ತಿಳಿಸಿದರು. ಇದೇ ಸಂದರ್ಭದಲ್ಲಿ ಜಿಲ್ಲಾ ಗ್ರಾಮಾಧಿಕಾರಿ ಕಾಂತರಾಜ್, ಅಧೀಕ್ಷಕಿ ಪುಷ್ಪಕಲಾ, ರಾಜ್ಯ ಕಾಂಪೋಸ್ಟ್ ನಿಗಮ ಮಂಡಳಿ ಅಧ್ಯಕ್ಷ ಮಹದೇವಯ್ಯ, ಖಾದಿ ಗ್ರಾಮೋದ್ಯೋಗ ಆಯೋಗದ ವೇಣುಗೋಪಾಲ್ ಅಧೀನ ಕಾರ್ಯದರ್ಶಿ ಮತ್ತು ಹಣಕಾಸು ಇಲಾಖೆಯ ಮಂಜುನಾಥ್ ಸೇರಿದಂತೆ ಇತರರು ಹಾಜರಿದ್ದರು. (ಜಿ.ಕೆ,ಎಸ್.ಎಚ್)

Leave a Reply

comments

Related Articles

error: