
ಕರ್ನಾಟಕಪ್ರಮುಖ ಸುದ್ದಿಮೈಸೂರು
ಕೃಷಿ ಹಾಗೂ ಕೈಗಾರಿಕೋದ್ಯಮಕ್ಕೆ ಹೆಚ್ಚು ಒತ್ತು ನೀಡದಿದ್ದರೆ ದೇಶ ಅಭಿವೃದ್ಧಿಯಾಗಲು ಸಾಧ್ಯವೇ ಇಲ್ಲ : ಮಾಜಿ ಸಿಎಂ ಸಿದ್ದರಾಮಯ್ಯ
ಮೈಸೂರು,ಜ.31:- ನಾಳೆ ಕೇಂದ್ರ ಸರ್ಕಾರದ ಬಜೆಟ್ ಹಿನ್ನಲೆ ಮೈಸೂರಿನಲ್ಲಿಂದು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಮಾಜಿ ಸಿಎಂ ಸಿದ್ದರಾಮಯ್ಯ ಈ ಸರ್ಕಾರದಿಂದ ನಾನು ಯಾವ ನಿರೀಕ್ಷೆ ಇಟ್ಟಿಲ್ಲ. ನಿಮಗೇನಾದ್ರು ನಿರೀಕ್ಷೆ ಇದೆಯಾ? ಎಕಾನಾಮಿಕ್ ಸರ್ವೆಯಲ್ಲಿ ಬಿಜೆಪಿಯವರು ಸುಳ್ಳು ಹೇಳಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ಜಿಡಿಪಿ ಗಣನೀಯವಾಗಿ ಪಾತಳಕ್ಕೆ ಇಳಿದಿದೆ. ಮನಮೋಹನ್ ಸಿಂಗ್ ಅವರ ಬಳಿಕ ಜಿಡಿಪಿ ಪ್ರತಿ ವರ್ಷ ಕುಸಿದಿದೆ. 2019/20 ರಲ್ಲಿ ಜಿಡಿಪಿ ಗ್ರೋತ್ 4.2 ಇತ್ತು, ಆ ವೇಳೆ ಕೊರೋನಾ ಇರಲಿಲ್ಲ.
ಈ ವರ್ಷ 20/21 ರಲ್ಲಿ ಜಿಡಿಪಿ -7.7% ಇದೆ. ಅದನ್ನ ಮುಚ್ಚಿ ಹಾಕಲು 21/22ಕ್ಕೆ 11 ಪರ್ಸೆಂಟ್ ಆಗುತ್ತೆ ಅಂತಾರೆ. ಇದನ್ನು ಸಹ ಎಕಾನಾಮಿಕ್ ಸರ್ವೆಯಲ್ಲಿ ಸುಳ್ಳು ಹೇಳಿದ್ದಾರೆ. ಜಿಡಿಪಿ ವಿಷಯದಲ್ಲಿ ಕೇಂದ್ರ ಸರ್ಕಾರ ಸುಳ್ಳು ಹೇಳಿದೆ. ಜನರಿಗೆ ತಪ್ಪು ಮಾಹಿತಿ ನೀಡಿ ದಾರಿ ತಪ್ಪಿಸುವ ಕೆಲಸ ಮಾಡ್ತಿದ್ದಾರೆ.
ಜನರಿಗೆ ದಾರಿ ತಪ್ಪಿಸುವ ಕೆಲಸ ಕೇಂದ್ರ ಸರ್ಕಾರ ಮಾಡಿದೆ ಎಂದು ಮೈಸೂರಿನಲ್ಲಿ ಕೇಂದ್ರದ ಬಜೆಟ್ ನಿರೀಕ್ಷೆ ಕುರಿತಂತೆ ಮಾಜಿ ಸಿಎಂ ಸಿದ್ದರಾಮಯ್ಯ ಗರಂ ಆದರು.
ಜೆಡಿಎಸ್ ಒಂದು ರಾಜಕೀಯ ಪಕ್ಷವೇ ಅಲ್ಲ. ರಾಷ್ಟ್ರಪತಿ ಭಾಷಣ ತ್ಯಜಿಸುವ ಹೆಚ್.ಡಿ.ದೇವೇಗೌಡ ಹೇಳಿಕೆ ಹಿನ್ನಲೆಯಲ್ಲಿ ಪ್ರತಿಕ್ರಿಯಿಸಿ ಅವರ ಬಗ್ಗೆ ನಾನು ಮಾತೆ ಆಡಲ್ಲ. ನನ್ನ ಪ್ರಕಾರ ಜೆಡಿಎಸ್ ಇಟ್ಸ್ ನಾಟ್ ಎ ಪೊಲಿಟಿಕಲ್ ಪಾರ್ಟಿ ಎಂದರು.
ದೇಶದಲ್ಲಿ ನಿರುದ್ಯೋಗ ಸಮಸ್ಯೆ ಹೆಚ್ಚಾಗುತ್ತಿದೆ. ನಗರಪ್ರದೇಶದಲ್ಲಿ 9.2% ರಷ್ಟು ಹಾಗೂ ಗ್ರಾಮೀಣ ಪ್ರದೇಶದಲ್ಲಿ 8.9 ರಷ್ಟು ನಿರುದ್ಯೋಗ ಸಮಸ್ಯೆ ಇದೆ. ಮನಮೋಹನ್ ಸಿಂಗ್ ಪ್ರಧಾನಿ ಆಗಿದ್ದಾಗ 2.9ರಷ್ಟು ಮಾತ್ರ ನಿರುದ್ಯೋಗ ಸಮಸ್ಯೆ ಇತ್ತು. ದೇಶದಲ್ಲಿ 9.5ರಷ್ಟು ಪದವೀಧರರು, ತಾಂತ್ರಿಕ ವಿಭಾಗದ ವಿದ್ಯಾರ್ಥಿಗಳು ನಿರುದ್ಯೋಗ ಸಮಸ್ಯೆ ಎದುರಿಸುತ್ತಿದ್ದಾರೆ. ಕೃಷಿ ಹಾಗೂ ಕೈಗಾರಿಕೋದ್ಯಮಕ್ಕೆ ಹೆಚ್ಚು ಒತ್ತು ನೀಡದಿದ್ದರೆ ದೇಶ ಅಭಿವೃದ್ಧಿಯಾಗಲು ಸಾಧ್ಯವೇ ಇಲ್ಲ ಎಂದರು. (ಕೆ.ಎಸ್,ಎಸ್.ಎಚ್)