ಕರ್ನಾಟಕ

ನಿವೃತ್ತ ಡಿಎಸ್ಪಿ ಮೇಲೆ ಹಲ್ಲೆ ಪ್ರಕರಣ : ಶಿವಾಜಿ ಸುಂಠಕರ ಬಂಧನ

ಬೆಳಗಾವಿ: ಬೆಳಗಾವಿ ಮಾಜಿ ಮೇಯರ್ ಹಾಗೂ ಎಂಇಎಸ್ ಮುಖಂಡ ಶಿವಾಜಿ ಸುಂಟಕರ್ ಬಂಧನವಾಗಿದೆ. ನಿವೃತ್ತ ಡಿವೈಎಸ್‍ಪಿ ಸದಾನಂದ ಪಡೋಳಕರ್ ಎಂಬುವವರ ಮೇಲೆ ಹಲ್ಲೆ ಮಾಡಿದ ಆರೋಪ ಅವರ ಮೇಲಿದೆ.

ಶನಿವಾರ ಬೆಳಿಗ್ಗೆ ಕಣಬರ್ಗಿ ಗ್ರಾಮದಲ್ಲಿ ಈ ಹಲ್ಲೆ ಘಟನೆ ನಡೆದ ಬಗ್ಗೆ ಭಾನುವಾರ ರಾತ್ರಿ ಮಾಳಮಾರುತಿ ಪೊಲೀಸ್ ಠಾಣೆ ಯಲ್ಲಿ ಪ್ರಕರಣ ದಾಖಲಾಗಿತ್ತು. ಕಾರ್ಯಾಚರಣೆಗಿಳಿದ ಪೊಲೀಸರು ತಡರಾತ್ರಿ ಶಿವಾಜಿಯನ್ನು ಬಂಧಿಸಿದರು. ಘಟನೆ ಸಂಬಂಧ ಪೊಲೀಸ್ ಠಾಣೆ ಎದುರು ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು.

ಶನಿವಾರ ಬೆಳಿಗ್ಗೆ ವಾಯುವಿಹಾರದಲ್ಲಿದ್ದ ಸಂದರ್ಭ ಅನುಚಿತವಾಗಿ ವರ್ತಿಸಿದ್ದೇ ಹಲ್ಲೆಗೆ ಕಾರಣ ಎನ್ನಲಾಗಿದೆ.

ತಡರಾತ್ರಿ ಎಸಿಪಿ ಶಿವಕುಮಾರ್ ಹಾಗೂ ಇನ್ಸ್’ಪೆಕ್ಟರ್ ಕೇಶವ ಟಿಂಗಿಕಾರ ನೇತೃತ್ವದ ತಂಡ ಸುಂಟಕರ ಅವರನ್ನು ಬಂಧಿಸಿ ಎರಡನೇ ಜೆಎಂಎಫ್ ನ್ಯಾಯಾಲಯಕ್ಕೆ ಹಾಜರುಪಡಿಸಿದರು. ನಂತರ ಅವರನ್ನು ನ್ಯಾಯಾಂಗ ಬಂಧನಕ್ಕೆ ನೀಡಿದ ಕಾರಣ ಹಿಂಡಲಗಾ ಜೈಲಿಗೆ ಕರೆದೊಯ್ಯಲಾಗಿದೆ. ಮಾಳಮಾರುತಿ ಠಾಣೆಯಲ್ಲಿ ಸೆಕ್ಷೆನ್ 341, 323, 506, 507 ಅಡಿ ಪ್ರಕರಣ ದಾಖಲಾಗಿದೆ.

(CT)

Leave a Reply

comments

Related Articles

error: