ಕರ್ನಾಟಕಪ್ರಮುಖ ಸುದ್ದಿ

ನವಿಲತೀರ್ಥ ಜಲ ಸಂಗ್ರಹ ಖಾಲಿ; ಹುಬ್ಬಳ್ಳಿ-ಧಾರವಾಡ, ಬೆಳಗಾವಿಗೆ ಕಾಡಲಿದೆ ನೀರಿನ ಬರ

ಬೆಳಗಾವಿ ಜಿಲ್ಲೆಯಲ್ಲಿ ತೀವ್ರ ಬರಗಾಲದ ಛಾಯೆ ಆವರಿಸಿದೆ. ಜಿಲ್ಲೆಯ ಕೃಷ್ಣಾ ನದಿಯ ಮಡಿಲಲ್ಲಿ ಮಹಾರಾಷ್ಟ್ರದ ನೀರು ಹರಿಯುತ್ತಿದ್ದು ಇದನ್ನು ಬಿಟ್ಟರೆ ಜಿಲ್ಲೆಯ ಉಳಿದ ನದಿ, ಕೆರೆ, ಹಳ್ಳಗಳು ಬತ್ತಿ ಹೋಗಿವೆ.

37.731 ಟಿಎಂಸಿ ಸಾಮರ್ಥ್ಯ ಹೊಂದಿರುವ ಬೆಳಗಾವಿ ಜಿಲ್ಲೆಯ ಸವದತ್ತಿಯ ನವಿಲ ತೀರ್ಥ ಜಲಾಶಯದಲ್ಲಿ ಕೇವಲ 1.516 ಟಿಎಂಸಿ ನೀರು ಮಾತ್ರ ಬಾಕಿ ಉಳಿದುಕೊಂಡಿದೆ ಈ ಜಲಾಶಯ ದಲ್ಲಿ ಅತ್ಯಂತ ಕಡಿಮೆ ಪ್ರಮಾಣದ ನೀರು ಬಾಕಿ ಉಳಿದಿರುವುದರಿಂದ ಬೆಳಗಾವಿ-ಹುಬ್ಬಳ್ಳಿ ಧಾರವಾಡ ಜಿಲ್ಲೆಯ ಜನರಿಗೆ ನೀರಿನ ಸಮಸ್ಯೆ ಎದುರಾಗಲಿದೆ.

ಈ ಜಲಾಶಯದಿಂದ ಬೆಳಗಾವಿ ಜಿಲ್ಲೆಯ ಸವದತ್ತಿ, ಬೈಲಹೊಂಗಲ, ರಾಮದುರ್ಗ ತಾಲೂಕಿನ ಗ್ರಾಮಗಳಿಗೆ ನೀರು ಪೂರೈಕೆ ಆಗುವುದರ ಜೊತೆಗೆ ಹುಬ್ಬಳ್ಳಿ ಧಾರವಾಡ ಮಹಾನಗರಗಳಿಗೂ ನವಿಲತೀರ್ಥ ಜಲಾಶಯದಿಂದಲೇ ನೀರು ಪೂರೈಕೆ ಆಗುತ್ತದೆ.

ನವಿಲತೀರ್ಥ ಜಲಾಶಯದಿಂದ ಹುಬ್ಬಳ್ಳಿ ಧಾರವಾಡ ಮಹಾನಗರಕ್ಕೆ ಪ್ರತಿ ದಿನ 64 ಕ್ಯುಸೆಕ್ಸ್ ಮಾತ್ರ ನೀರು ಸರಬರಾಜಾಗುತ್ತಿದ್ದು, ಬೆಳಗಾವಿ ಜಿಲ್ಲೆಯ ಕೆಲವು ತಾಲೂಕುಗಳು ಸೇರಿ ಈ ಜಲಾಶಯದಿಂದ ಪ್ರತಿ ದಿನ 124 ಕ್ಯುಸೆಕ್ಸ್ ನೀರು ಖಾಲಿಯಾಗುತ್ತಿದೆ.

ಒಂದು ಟಿಎಂಸಿ ಅಂದ್ರೆ 11,574 ಕ್ಯೂಸೆಕ್ಸ್. ಪ್ರತಿ ದಿನ 154 ಕ್ಯುಸೆಕ್ಸ್ ನೀರು ಸರಬರಾಜು ಎಂದರೆ ಜೂನ್ ತಿಂಗಳವರೆಗೂ ನೀರು ಸರಬರಾಜು ಮಾಡಲು ಸಾಧ್ಯವೆನ್ನುತ್ತಾರೆ ನೀರಾವರಿ ಇಲಾಖೆಯ ಅಧಿಕಾರಿಗಳು.

ಜಿಲ್ಲೆಯಲ್ಲಿ ಬಿಸಿಲಿನ ತಾಪ ಹೆಚ್ಚಾಗಿದೆ. ಬಿಸಿಲಿನ ಕಾವಿಗೆ ಜಲಾಶಯದ ನೀರು ಹೆಚ್ಚಿನ ಪ್ರಮಾಣದಲ್ಲಿ ಆವಿಯಾಗುತ್ತಿದೆ. ಸಕಾಲದಲ್ಲಿ ಮಳೆರಾಯ ಕೃಪೆ ತೋರದಿದ್ದರೆ ಬರಗಾಲದ ಪರಿಸ್ಥಿತಿ ಮತ್ತಷ್ಟು ಜಟಿಲಗೊಳ್ಳಲಿದೆ.

ಒಟ್ಟಾರೆ ಬೆಳಗಾವಿ ಜಿಲ್ಲೆಯಲ್ಲಿ ತೀವ್ರ ಬರಗಾಲದ ಪರಿಸ್ಥಿತಿ ಎದುರಾಗಿದ್ದು ಬೆಳಗಾವಿ ಹಾಗೂ ಹುಬ್ಬಳ್ಳಿ ಧಾರವಾಡ ಮಹಾನಗರದ ಜನ ನೀರು ಪೋಲು ಮಾಡದೆ ಬರಗಾಲ ಪರಿಸ್ಥಿತಿಯನ್ನು ಎದುರಿಸಲು ಸಹಕರಿಸುವದು ಅತ್ಯಗತ್ಯವಾಗಿದೆ.

(CT)

Leave a Reply

comments

Related Articles

error: