ಕರ್ನಾಟಕಪ್ರಮುಖ ಸುದ್ದಿ

ಬಿಜೆಪಿ ನಾಯಕಿ ವಿಮಲಾಗೌಡ ವಿಧಿವಶ

ಬೆಂಗಳೂರು : ಬಿಜೆಪಿ ನಾಯಕಿ, ರಾಜ್ಯ ವಿಧಾನ ಪರಿಷತ್ ಮಾಜಿ ಉಪಸಭಾಪತಿ ವಿಮಲಾಗೌಡ ಅವರು ಇಂದು ಸಂಜೆ 7.27ಕ್ಕೆ ನಿಧನರಾದರು. ಅವರಿಗೆ 63 ವರ್ಷ ವಯಸ್ಸಾಗಿತ್ತು.

ಹೃದ್ರೋಗ ಹಾಗೂ ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದ 63 ವರ್ಷದ ವಿಮಲಾಗೌಡ ಅವರನ್ನು ಒಂದು ತಿಂಗಳ ಹಿಂದೆ ನಗರದ ನಾರಾಯಣ ಹೃದಯಾಲಯಕ್ಕೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಇಂದು ಕೊನೆಯುಸಿರೆಳೆದಿದ್ದಾರೆ.
1955ರ ನವೆಂಬರ್ 20ರಂದು ಬೆಂಗಳೂರಿನಲ್ಲಿ ಜನಿಸಿದ ವಿಮಲಾಗೌಡ ಅವರು 1980ರಲ್ಲಿ ಬಿಜೆಪಿಗೆ ಸೇರ್ಪಡೆಗೊಂಡಿದ್ದರು. ಕರ್ನಾಟಕ ವಿಧಾನಪರಿಷತ್‍ಗೆ ಸಭಾಪತಿಯಾದ ಮಹಿಳೆಯರಲ್ಲಿ ವಿಮಲಾ ಗೌಡ ಅವರು ಮೂರನೆಯವರು.
ಎಚ್‍.ಡಿ. ದೇವೇಗೌಡ ಸಂತಾಪ :

ಮಾಜಿ ಉಪ ಸಭಾಪತಿ ಶ್ರೀಮತಿ ವಿಮಲಾ ಗೌಡ ಅವರ ನಿಧನದ ಸುದ್ದಿ ಕೇಳಿ ನನಗೆ ತೀವ್ರ ನೋವುಂಟಾಗಿದೆ ಎಂದು ಮಾಜಿ ಪ್ರಧಾನಿ ದೇವೇಗೌಡರು ಸಂತಾಪ ವ್ಯಕ್ತಪಡಿಸಿದ್ದಾರೆ. ವೈಯಕ್ತಿಕವಾಗಿ ದಿಟ್ಟ ಹಾಗೂ ಧೀಮಂತ ಸಹೋದರಿಯನ್ನು ಕಳೆದುಕೊಂಡಂತಾಗಿದೆ. ವಿಮಲಾ ಗೌಡ ಅವರ ನಿಧನದಿಂದ ರಾಜ್ಯಕ್ಕೆ ತುಂಬಲಾಗದ ನಷ್ಟವಾಗಿದೆ. ಭಗವಂತ ಅವರ ಆತ್ಮಕ್ಕೆ ಶಾಂತಿ ನೀಡಲಿ. ಅವರ ಕುಟುಂಬಕ್ಕೆ ದುಃಖ ಭರಿಸುವ ಶಕ್ತಿ ತುಂಬಲಿ ಎಂದು ಅವರು ಪ್ರಾರ್ಥಿಸಿದ್ದಾರೆ.

(ಎಸ್.ಎನ್/ಎನ್‍.ಬಿ.ಎನ್)

Leave a Reply

comments

Related Articles

error: