ಕ್ರೀಡೆದೇಶಪ್ರಮುಖ ಸುದ್ದಿ

ಭಾರತ-ಇಂಗ್ಲೆಂಡ್ ಆಟಗಾರರ ಕೊರೋನಾ ಟೆಸ್ಟ್ ನೆಗೆಟಿವ್ : ಇಂದಿನಿಂದ ತರಬೇತಿ ಪ್ರಾರಂಭ

ದೇಶ(ನವದೆಹಲಿ)ಫೆ.2:- ಇತ್ತೀಚೆಗೆ ಭಾರತ ಮತ್ತು ಇಂಗ್ಲೆಂಡ್ ಕ್ರಿಕೆಟ್ ತಂಡದ ಆಟಗಾರರ ಕೋವಿಡ್ -19 ಟೆಸ್ಟ್ ನೆಗೆಟಿವ್ ಬಂದಿದೆ. ಈಗ ಅವರ ನೆಟಸ್ ತರಬೇತಿ ಇಂದಿನಿಂದ ಪ್ರಾರಂಭವಾಗಲಿದೆ. ಟೀಮ್ ಇಂಡಿಯಾ ಶುಕ್ರವಾರದಿಂದ ಇಂಗ್ಲೆಂಡ್‌ ನೊಂದಿಗೆ ನಾಲ್ಕು ಪಂದ್ಯಗಳ ಟೆಸ್ಟ್ ಸರಣಿಯನ್ನು ಆಡಬೇಕಾಗಿದೆ. ಈ ಸರಣಿಯ ಮೊದಲ ಪಂದ್ಯ ಚೆನ್ನೈನ ಎಂ.ಎ.ಚಿದಂಬರಂ ಕ್ರೀಡಾಂಗಣದಲ್ಲಿ ನಡೆಯಲಿದೆ.
ಬಿಸಿಸಿಐ ನವೀಕರಣದ ಪ್ರಕಾರ, ಭಾರತೀಯ ಕ್ರಿಕೆಟ್ ತಂಡವು ಸೋಮವಾರ ಚೆನ್ನೈನಲ್ಲಿ ತನ್ನ ಕ್ವಾರೆಂಟೈನ್ ಪೂರ್ಣಗೊಳಿಸಿದೆ. ಕೋವಿಡ್ -19 ಗಾಗಿ ಮೂರು ಆರ್ಟಿ-ಪಿಸಿಆರ್ ಪರೀಕ್ಷೆಗಳನ್ನು ನಿಯಮಿತವಾಗಿ ನಡೆಸಲಾಗಿದೆ. ಎಲ್ಲಾ ಫಲಿತಾಂಶಗಳು ನೆಗೆಟಿವ್ ಬಂದಿದೆ. ಶ್ರೀಲಂಕಾ ಪ್ರವಾಸಕ್ಕೆ ಹೋಗದ ಇಂಗ್ಲೆಂಡ್‌ ನ ಬೆನ್ ಸ್ಟೋಕ್ಸ್, ಜೋಫ್ರಾ ಆರ್ಚರ್ ಮತ್ತು ರೋರಿ ಬರ್ನ್ಸ್ ಅವರ ಕ್ವಾರೆಂಟೈನ್ ಈಗಾಗಲೇ ಪೂರ್ಣಗೊಂಡಿದೆ. ಅವರು ತರಬೇತಿ ಪಡೆಯುತ್ತಿದ್ದಾರೆ. ಇಂಗ್ಲೆಂಡ್ ತಂಡಗಳು ಈಗ ಕ್ವಾರೆಂಟೈನ್ ನಿಂದ ಹೊರಬಂದಿವೆ. ತಂಡವು ಮಧ್ಯಾಹ್ನ ಎರಡು ರಿಂದ ಐದರವರೆಗೆ ಕ್ರೀಡಾಂಗಣದಲ್ಲಿ ಅಭ್ಯಾಸ ಮಾಡಲಿದೆ. (ಏಜೆನ್ಸೀಸ್,ಎಸ್.ಎಚ್)

Leave a Reply

comments

Related Articles

error: