ಮೈಸೂರು

ಸಿದ್ಧಗಂಗಾ ಮಠದ ಡಾ.ಶಿವಕುಮಾರ ಸ್ವಾಮೀಜಿಯವರ ದ್ವಿತೀಯ ವರ್ಷದ ಪುಣ್ಯ ಸ್ಮರಣೆ : ದಿನವಿಡೀ ದಾಸೋಹ

ಮೈಸೂರು ಫೆ.2:- ತ್ರಿವಿಧ ದಾಸೋಹದ ಮೂಲಕ ಕಲಿಯುಗದಲ್ಲಿ ನಡೆದಾಡುವ ದೇವರು ಎನಿಸಿಕೊಂಡಿದ್ದ ಸಿದ್ಧಗಂಗಾ ಮಠದ ಡಾ.ಶಿವಕುಮಾರ ಸ್ವಾಮೀಜಿಯವರ ದ್ವಿತೀಯ ವರ್ಷದ ಪುಣ್ಯ ಸ್ಮರಣೆ ಪ್ರಯುಕ್ತ ತಿ.ನರಸೀಪುರ ಪಟ್ಟಣದ ಹೆಳವರಹುಂಡಿಯಲ್ಲಿ ಸಾರ್ವಜನಿಕರಿಗೆ ನಿನ್ನೆ ದಿನವಿಡೀ ದಾಸೋಹವನ್ನು ಹಮ್ಮಿಕೊಳ್ಳಲಾಗಿತ್ತು.
ತಿ.ನರಸೀಪುರ ಪಟ್ಟಣದ ಹೆಳವರಹುಂಡಿಯ ನಂಜನಗೂಡು ಮುಖ್ಯರಸ್ತೆ ಸಿದ್ಧಗಂಗಾ ಶ್ರೀಗಳ ಪುಣ್ಯಸ್ಮರಣೆ ಹಿನ್ನಲೆಯಲ್ಲಿ ಕಳೆಗಟ್ಟಿತ್ತು. ಶಿವಕುಮಾರ ಸ್ವಾಮೀಜಿಯವರ ಸ್ಮರಣಾರ್ಥ ಸಮಸ್ತ ಗ್ರಾಮಸ್ಥರು ಆಯೋಜಿಸಿದ್ದ ದಾಸೋಹ ಭಾನುವಾರ ರಾತ್ರಿಯಿಂದ ಸೋಮವಾರ ಸಂಜೆಯವರೆಗೂ ಬಿರುಸಿನಿಂದ ನಡೆಯಿತು. ಹೆಳವರಹುಂಡಿ ವೃತ್ತದಲ್ಲಿ ಭವ್ಯವಾಗಿ ಅಲಂಕಾರಗೊಂಡಿದ್ದ ಶ್ರೀಗಳ ಭಾವಚಿತ್ರವಿದ್ದ ನಾಮಫಲಕ ಹಾಗೂ ಬಸವೇಶ್ವರರ ಪುತ್ಥಳಿಗೆ ವಿಶೇಷ ಪೂಜೆ ಹಾಗೂ ಪುಷ್ಪಾರ್ಚನೆ ಸಾಂಗವಾಗಿ ನೆರವೇರಿದವು.

ಪ್ರಥಮ ಪೂಜೆಯೊಂದಿಗೆ ಪುಷ್ಪಾರ್ಚನೆ ನೆರವೇರಿಸಿದ ವಾಟಾಳು ಮಠದ ಸಿದ್ಧಲಿಂಗ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ದಾಸೋಹ ಜೊತೆ ವಿದ್ಯೆ ಹಾಗೂ ವಾಸ್ತವ್ಯಕ್ಕೆ ಆಸರೆಯಾಗುವ ಮೂಲಕ ಪರಮಪೂಜ್ಯ ಶಿವಕುಮಾರ ಶ್ರೀಗಳು ಶರಣ ಪರಂಪರೆಯನ್ನು ಉತ್ತುಂಗಕ್ಕೆ ಏರಿಸಿದ್ದರು. ತ್ರಿವಿಧ ದಾಸೋಹಿಯ ಪುಣ್ಯಸ್ಮರಣೆ ದಾಸೋಹದ ಮೂಲಕ ಅರ್ಥಪೂರ್ಣವಾಗಿ ಆಚರಣೆಯಾಗುತ್ತಿದೆ. ಹೆಳವರಹುಂಡಿಯಲ್ಲಿ ಎರಡು ದಿನಗಳಿಂದಲೂ ದಿನವೀಡಿ ದಾಸೋಹವನ್ನು ನಡೆಸಿ, ಶ್ರೀಗಳಿಗೆ ಗ್ರಾಮಸ್ಥರು ನಮನ ಸಲ್ಲಿಸುತ್ತಿರುವುದು ಹೆಮ್ಮೆಯ ವಿಷಯವಾಗಿದೆ ಎಂದು ತಿಳಿಸಿದರು.
ಭಾನುವಾರ ರಾತ್ರಿಯಿಂದ ಸೋಮವಾರ ಸಂಜೆಯವರೆಗೂ ನಡೆದ ದಾಸೋಹ ಲಕ್ಷಾಂತರ ಜನರು ಭೋಜನ ಸ್ವೀಕರಿಸಿದರು. ವಿವಿಧ ಮಠಗಳ ಹರ ಗುರು ಚರಮೂರ್ತಿಗಳು, ಸಂಘ ಸಂಸ್ಥೆಗಳ ಅಧ್ಯಕ್ಷರು, ಪದಾಧಿಕಾರಿಗಳು ಹಾಗೂ ಹೆಳವರಹುಂಡಿ ಗ್ರಾಮಸ್ಥರು ಹಾಜರಿದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: