ಮೈಸೂರು

ಇಂದು ಯೋಗ ಪಟು ಎನ್ ಅನಂತ ಅವರಿಗೆ ಶ್ರೇಷ್ಠ ಸಾಧಕ ಪ್ರಶಸ್ತಿ ಪ್ರದಾನ

ಮೈಸೂರು.ಫೆ.2:- ಶ್ರೀವೀರ ಮದಕರಿ ನಾಯಕ ಯುವ ಬಳಗದ ವತಿಯಿಂದ ಇಂದು ಸಂಜೆ 6 ಗಂಟೆಗೆ ನಾರಾಯಣ ಶಾಸ್ತ್ರೀ ರಸ್ತೆಯಲ್ಲಿರುವ ನಕ್ಷತ್ರ ಕಾಂಪ್ಲೆಕ್ಸ್ ಬಳಿ ಸಾಹಿತ್ಯ, ಯೋಗ ಹಾಗೂ ಪತ್ರಿಕಾ ರಂಗದಲ್ಲಿ ವಿಶಿಷ್ಟ ಸಾಧನೆಗೈದಿರುವ ಯೋಗ ಪಟು ಎನ್ ಅನಂತ ಅವರಿಗೆ ಶ್ರೇಷ್ಠ ಸಾಧಕ ಪ್ರಶಸ್ತಿ ಪ್ರದಾನ ಮಾಡಲಾಗುವುದು.
ಇದೇ ವೇಳೆ ಬಡ ವಿದ್ಯಾರ್ಥಿಗಳಿಗೆ ನೋಟ್ ಬುಕ್ ವಿತರಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಕಾರ್ಯಕ್ರಮವನ್ನು ಮೈಸೂರು ಪೇಂಟ್ಸ್ ವಾರ್ನಿಷ್ ಅಧ್ಯಕ್ಷರಾದ ಫಣೀಶ್ ಉದ್ಘಾಟಿಸಲಿದ್ದಾರೆ. ಅಧ್ಯಕ್ಷತೆಯನ್ನು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾದ ಮಡ್ಡೀಕೆರೆ ಗೋಪಾಲ್ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಕಾಂಗ್ರೆಸ್ ಯುವ ಮುಖಂಡರಾದ ಎಂ. ಎನ್. ನವೀನ್ ಕುಮಾರ್, ಸುಯೋಗ್ ಆಸ್ಪತ್ರೆ ಅಧ್ಯಕ್ಷರಾದ ಡಾ. ಎಸ್.ಪಿ. ಯೋಗಣ್ಣ ಭಾಗವಹಿಸಲಿದ್ದಾರೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: