ಕ್ರೀಡೆಪ್ರಮುಖ ಸುದ್ದಿ

ಎಲ್ಲ ಮಾದರಿಯ ಕ್ರಿಕೆಟ್‌ ಗೆ ನಿವೃತ್ತಿ ಘೋಷಿಸಿದ ವೇಗದ ಬೌಲರ್ ಅಶೋಕ್ ದಿಂಡಾ

ದೇಶ(ಕೋಲ್ಕತ್ತ )ಫೆ.3:- ಎಲ್ಲ ಮಾದರಿಯ ಕ್ರಿಕೆಟ್‌ ಗೆ ಬಂಗಾಳದ ವೇಗದ ಬೌಲರ್ ಅಶೋಕ್ ದಿಂಡಾ ನಿವೃತ್ತಿ ಘೋಷಿಸಿದ್ದು, ಇದರೊಂದಿಗೆ ಒಂದೂವರೆ ದಶಕದ ಅವರ ವೃತ್ತಿ ಜೀವನಕ್ಕೆ ತೆರೆ ಎಳೆದಂತಾಗಿದೆ.

36ರ ಹರೆಯದ ದಿಂಡಾ ಟೀಂ ಇಂಟಿಯಾ ಪರ 13 ಏಕದಿನ ಕ್ರಿಕೆಟ್, 9 ಟಿ20 ಪಂದ್ಯಗಳಲ್ಲಿ ಆಡಿದ್ದಾರೆ. 2019-20ನೇ ಸಾಲಿನಲ್ಲಿ ಕೇವಲ ಒಂದು ರಣಜಿ ಪಂದ್ಯವನ್ನು ಆಡಿದ್ದ ಅವರು ಶಿಸ್ತು ಕ್ರಮ ಎದುರಿಸಿ, ಬಳಿಕ ಗೋವಾಕ್ಕೆ ತೆರಳಿದ್ದರು. ಸೈಯದ್ ಮುಷ್ತಾಕ್ ಅಲಿ ಟ್ರೋಫಿ ಟೂರ್ನಿಯಲ್ಲಿ ಮೂರು ಬಾರಿ ಗೋವಾ ತಂಡವನ್ನು ಪ್ರತಿನಿಧಿಸಿದ್ದಾರೆ.
‘ಇಂದು ನಾನು ಎಲ್ಲ ಮಾದರಿಯ ಕ್ರಿಕೆಟ್‌ನಿಂದ ನಿವೃತ್ತಿಯಾಗುತ್ತಿದ್ದೇನೆ. ಬಿಸಿಸಿಐ ಮತ್ತು ಜಿಸಿಎಗೆ ಮೇಲ್ ಮೂಲಕ ಸಂದೇಶ ಕಳುಹಿಸಿದ್ದೇನೆ’ ಎಂದು ಈಡನ್‌ ಗಾರ್ಡನ್ಸ್‌ನಲ್ಲಿ ದಿಂಡಾ ಅವರು ಮಾಧ್ಯಮದವರಿಗೆ ತಿಳಿಸಿದ್ದಾರೆ.

ಅವರು ಐಪಿಎಲ್‌ನ 78 ಇನ್ನಿಂಗ್ಸ್ ‌ಗಳಲ್ಲಿ 68 ವಿಕೆಟ್‌ ಪಡೆದಿದ್ದಾರೆ. 18 ರನ್‌ ನೀಡಿ 4 ವಿಕೆಟ್ ಕಬಳಿಸಿರುವುದು ಐಪಿಎಲ್‌ನಲ್ಲಿ ಇವರ ಶ್ರೇಷ್ಠ ಸಾಧನೆಯಾಗಿದೆ. (ಏಜೆನ್ಸೀಸ್,ಎಸ್.ಎಚ್)

Leave a Reply

comments

Related Articles

error: