ಮೈಸೂರು

ಶ್ರೀ ನಟರಾಜ ಮಹಿಳಾ ವಸತಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಸರ್ವೋದಯ ದಿನ ಆಚರಣೆ

ಮೈಸೂರು,ಫೆ.3:- ಶ್ರೀ ನಟರಾಜ ಮಹಿಳಾ ವಸತಿ ಪ್ರಥಮ ದರ್ಜೆ ಕಾಲೇಜಿನಲ್ಲಿ ರಾಜ್ಯಶಾಸ್ತ್ರ ವಿಭಾಗ ಮತ್ತು ಎನ್‍ಎಸ್‍ಎಸ್ ವತಿಯಿಂದ ಸರ್ವೋದಯ ದಿನಾಚರಣಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.

ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದಂತಹ ಶ್ರೀ ನಟರಾಜ ಮಹಿಳಾ ವಸತಿ ಪ್ರಥಮ ದರ್ಜೆ ಕಾಲೇಜು ಉಪಪ್ರಾಂಶುಪಾಲರಾದ ಡಾ. ಜಿ. ಪ್ರಸಾದಮೂರ್ತಿ ಮಾತನಾಡಿ ಪಾಶ್ಚಾತ್ಯ ವಿದ್ವಾಂಸರಾದ ಆಲ್ಬರ್ಟ್ ಐನ್‍ಸ್ಟೀನ್‍ ರವರು ಗಾಂಧೀಜಿಯ ಬಗ್ಗೆ ಹೇಳುತ್ತ “ರಕ್ತ ಮಾಂಸಗಳಿಂದ ತುಂಬಿದ ಇಂಥ ವ್ಯಕ್ತಿ ಎಂದಾದರೂ ಈ ಭೂಮಿಯ ಮೇಲೆ ನಡೆದಾಡಿದ್ದ ಎನ್ನುವುದನ್ನು ಮುಂದಿನ ಪೀಳಿಗೆಯವರು ನಂಬುವುದು ಕಷ್ಟ” ಎಂದು ಹೇಳಿದ್ದಾರೆ. ಅಂತಹ ಮಹಾನ್ ವ್ಯಕ್ತಿ ಗಾಂಧೀಜಿಯವರು. ಸ್ವಾತಂತ್ರದ ನೇತಾರ, ಮುತ್ಸದ್ಧಿ, ಮಹಾನ್ ನಾಯಕ ಗಾಂಧೀಜಿ. ಇವರ ಅಸ್ತ್ರವೆಂದರೆ-ಸತ್ಯ, ಅಹಿಂಸೆ ಹಾಗೂ ಸತ್ಯಾಗ್ರಹ ಬಸವಣ್ಣ, ಕನಕದಾಸರು ಮುಂತಾದವರೂ ಕೂಡ ಇದೇ ಹಿನ್ನೆಲೆಯಲ್ಲಿ ಚಿಂತಿಸುತ್ತಿದ್ದರು”. ಎಂದು ತಿಳಿಸಿದರು.

ಪ್ರತಿ ಧರ್ಮದಲ್ಲೂ ಸತ್ಯ ಮತ್ತು ಪ್ರೀತಿ ಇರುತ್ತದೆ. ಅದನ್ನು ಸ್ವೀಕರಿಸಬೇಕು. ಮಹಾಕ್ರೂರಿಗಳ ಮನಸ್ಸು ಬದಲಿಸುವ ಶಕ್ತಿ ಹೊಂದಿದ್ದ ಏಕೈಕ ವ್ಯಕ್ತಿ ಗಾಂಧೀಜಿ ಮಾತ್ರ. ಅಹಿಂಸೆಯಿಂದ ಪ್ರಪಂಚದ ಯಾವುದೇ ದೇಶವು ಸ್ವಾತಂತ್ರ ಗಳಿಸಿದ ಉದಾಹರಣೆಗಳಿಲ್ಲ. ಭಾರತದಲ್ಲಿ ಮಾತ್ರ ಗಾಂಧೀಜಿ ಅಹಿಂಸಾತ್ಮಕ ಹೋರಾಟದಿಂದ ಅದು ಸಾಧ್ಯವಾಯಿತು. ಗಾಂಧೀಜಿಯವರು ಭಾರತದ ಸಮಸ್ಯೆಗಳ ಮೂಲ ಕಾರಣವನ್ನು ಗುರುತಿಸಿ ಅವುಗಳನ್ನು ಪರಿಹರಿಸಲು ಸಪ್ತ ಪಾತಕಗಳಿಂದ ದೂರವಿರಬೇಕೆಂದು ಮನಗಂಡಿದ್ದರು ಎಂದು ಹೇಳಿದರು.

ದ್ವಿತೀಯ ಬಿ.ಎ ವಿದ್ಯಾರ್ಥಿನಿ ನಿಖಿತಾ ಗಾಂಧೀಜಿಯವರ ಕುರಿತಾಗಿ ಪ್ರಬಂಧ ಮಂಡಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಡಾ. ಎಂ. ಶಾರದ., ಪ್ರಾಂಶುಪಾಲರು., ಶ್ರೀ ನಟರಾಜ ಮಹಿಳಾ ವಸತಿ ಪ್ರಥಮ ದರ್ಜೆ ಕಾಲೇಜು., ಮೈಸೂರು ಇವರು ವಹಿಸಿದ್ದರು. ವೇದಿಕೆಯಲ್ಲಿ ಹೇಮಾವತಿ ಕೆ.ಎಂ., ರಾಷ್ಟ್ರೀಯ ಸೇವಾ ಯೋಜನಾ ಕಾರ್ಯಕ್ರಮಾಧಿಕಾರಿಗಳು ಹಾಗೂ ಪೂರ್ಣಿಮಾ ಹೆಚ್.ಎ., ಸಹಾಯಕ ಪ್ರಾಧ್ಯಾಪಕರು, ರಾಜ್ಯಶಾಸ್ತ್ರ ವಿಭಾಗ ಶ್ರೀ ನಟರಾಜ ಮಹಿಳಾ ವಸತಿ ಪ್ರಥಮ ದರ್ಜೆ ಕಾಲೇಜು., ಮೈಸೂರು ಇವರು ಉಪಸ್ಥಿತರಿದ್ದರು.

ಪ್ರಸ್ತುತ ಸಾಲಿನ ರಾಷ್ಟ್ರೀಯ ಸೇವಾ ಯೋಜನೆಯ ಕರ್ನಾಟಕ ರಾಜ್ಯದ ಗಣರಾಜ್ಯೋತ್ಸವ ಪಥಸಂಚಲನಕ್ಕೆ ಆಯ್ಕೆಯಾಗಿ, ಅದರಲ್ಲಿ ಯಶಸ್ವಿಯಾಗಿ ಪಾಲ್ಗೊಂಡು ಕಾಲೇಜಿಗೆ ಕೀರ್ತಿ ತಂದ ನಿಖಿತ., ದ್ವಿತೀಯ ಬಿ.ಎ., ಇವರನ್ನು ಸನ್ಮಾನಿಸಲಾಯಿತು.

ಮಮತ ಪ್ರಾರ್ಥಿಸಿದರೆ, ಪವಿತ್ರ ಸ್ವಾಗತಿಸಿದರು. ರಮ್ಯ ನಿರೂಪಿಸಿದರೆ, ಮೈನಾವತಿ ವಂದಿಸಿದರು. (ಎಸ್.ಎಚ್)

Leave a Reply

comments

Related Articles

error: