ಕರ್ನಾಟಕಪ್ರಮುಖ ಸುದ್ದಿಮೈಸೂರು

ವಿಶ್ವೇಶ್ವರಯ್ಯ ನಾಲೆಗೆ ಬಿದ್ದು ಬೈಕ್ ಸವಾರ ಸಾವು

ಮೈಸೂರು/ಮಂಡ್ಯ,ಫೆ.3:- ಪಾಂಡವಪುರ ತಾಲೂಕಿನ ಬನಘಟ್ಟ ಬಳಿಯ ವಿಶ್ವೇಶ್ವರಯ್ಯ ನಾಲೆಗೆ ಸೋಮವಾರ ರಾತ್ರಿ ಬೈಕ್ ಸವಾರರೋರ್ವರು ಬಿದ್ದು ಮೃತಪಟ್ಟಿದ್ದಾರೆ.
ಮೃತರನ್ನು ಮೈಸೂರಿನ ರಮಾಬಾಯಿ ನಗರದ ನಿವಾಸಿ ಕೃಷ್ಣಶೆಟ್ಟಿ ಅವರ ಪುತ್ರ ಯತೀಶ್ (34) ಎಂದು ಗುರುತಿಸಲಾಗಿದೆ. ಯುವಕ ಯತೀಶ್ ಸೋಮವಾರ ರಾತ್ರಿ ಮೈಸೂರಿನಿಂದ ಮೇಲುಕೋಟೆಯಲ್ಲಿರುವ ತನ್ನ ಅಕ್ಕನ ಮನೆಗೆ ಬೈಕ್ ನಲ್ಲಿ ಹೋಗುವಾಗ ಬನಘಟ್ಟ ಗ್ರಾಮದ ಬಳಿಯ ವಿಶ್ವೇಶ್ವರಯ್ಯ ನಾಲೆ ಸೇತುವೆ ಮೇಲಿಂದ ಆಯತಪ್ಪಿ ಕೆಳಕ್ಕೆ ಬಿದ್ದಿದ್ದಾರೆ.
ವಿಷಯ ತಿಳಿದ ಪೊಲೀಸರು, ಸ್ಥಳಕ್ಕೆ ಬಂದು ಮೃತದೇಹವನ್ನು ಹೊರ ತೆಗೆದಿದ್ದಾರೆ. ಪಾಂಡವಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: