
ಮೈಸೂರು
ಸುಯೋಗ್ ಆಸ್ಪತ್ರೆಯಲ್ಲಿ ಕ್ಯಾನ್ಸರ್ ಘಟಕಕ್ಕೆ ಫೆಬ್ರವರಿ 6 ರಂದು ಚಾಲನೆ : ಡಾ.ಎಸ್ .ಪಿ ಯೋಗಣ್ಣ
ಮೈಸೂರು,ಫೆ.3:- ಸುಯೋಗ್ ಆಸ್ಪತ್ರೆಯಲ್ಲಿ ಕ್ಯಾನ್ಸರ್ ಘಟಕಕ್ಕೆ ಫೆಬ್ರವರಿ 6 ರಂದು ಚಾಲನೆ ನೀಡಲಾಗುವುದು ಎಂದು ಸುಯೋಗ್ ಆಸ್ಪತ್ರೆಯ ಅಧ್ಯಕ್ಷ ಡಾ.ಎಸ್ .ಪಿ ಯೋಗಣ್ಣ ತಿಳಿಸಿದರು.
ಪತ್ರಕರ್ತರ ಭವನದಲ್ಲಿಂದು ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಮೈಸೂರಿನ ರಾಮಕೃಷ್ಣನಗರದಲ್ಲಿರುವ ಸುಯೋಗ್ ಆಸ್ಪತ್ರೆಯ ವತಿಯಿಂದ ಫೆಬ್ರವರಿ ರ6 ಶನಿವಾರ ಬೆಳಿಗ್ಗೆ 11 ಗಂಟೆಗೆ ಸುಯೋಗ್ ಆಸ್ಪತ್ರೆಯಲ್ಲಿ ಮೈಸೂರಿನ ಪ್ರಖ್ಯಾತ ಭಾರತ್ ಕ್ಯಾನ್ಸರ್ ಆಸ್ಪತ್ರೆಯ ಸಹಯೋಗದೊಂದಿಗೆ ಸುಯೋಗ್_ಭಾರತ್ ಕ್ಯಾನ್ಸರ್ ಸೆಂಟರ್ ಎಂಬ ಸಂಯುಕ್ತ ಹೆಸರಿನಡಿ ಕ್ಯಾನ್ಸರ್ ಕೇಂದ್ರ ಪ್ರಾರಂಭವಾಗಲಿದ್ದು , ಶಾಸಕರು ಹಾಗೂ ವೈದ್ಯರಾದ ಡಾ. ಯತೀಂದ್ರ ಸಿದ್ದರಾಮಯ್ಯನವರು ಈ ಕ್ಯಾನ್ಸರ್ ಘಟಕವನ್ನು ಉದ್ಘಾಟಿಸಲಿದ್ದಾರೆ .
ಈ ಘಟಕದಲ್ಲಿ ಎಲ್ಲಾ ಬಗೆಯ ಅತ್ಯಾಧುನಿಕ ಕ್ಯಾನ್ಸರ್ ರೋಗಪತ್ತೆ ತನಿಖಾ ಪರೀಕ್ಷೆಗಳು ಮತ್ತು ಚಿಕಿತ್ಸಾ ವಿಧಾನಗಳು ಲಭ್ಯವಿರುತ್ತವೆ . ಇದಲ್ಲದೆ ಎಲ್ಲಾ ಖಾಸಗಿ ವಿಮಾ ಕಂಪನಿಗಳ ನಗದು ರಹಿತ ಚಿಕಿತ್ಸಾ ಸೌಲಭ್ಯಗಳು ಲಭ್ಯವಿರುತ್ತವೆ.
ಕ್ಯಾನ್ಸರ್ ಗೀಡಾದವರಿಗೆ ಆತ್ಮವಿಶ್ವಾಸವನ್ನು ತುಂಬಲು ಕ್ಯಾನ್ಸರ್ ರೋಗಿಗಳನ್ನು ಒಳಗೊಂಡಂತೆ ಕ್ಯಾನ್ಸರ್ ಆತ್ಮವಿಶ್ವಾಸ ಕೇಂದ್ರವನ್ನು ತೆರೆಯಲಾಗಿದ್ದು ಅಂದೇ ಇದೂ ಕೂಡ ಉದ್ಘಾಟನೆಗೊಳ್ಳಲಿದೆ. ಈಗಾಗಲೇ ಕ್ಯಾನ್ಸರ್ನಿಂದ ಕ್ಯಾನ್ಸರ್ ಪೀಡಿತರ ಕ್ಷೇಮಾಭಿವೃದ್ಧಿಗೆ ರಮೇಶ್ ಬಿಳಿಕೆರೆ ಅವರ ನೇತೃತ್ವದಲ್ಲಿ ಶ್ರಮಿಸುತ್ತಿರುವ ಸಂಜೀವಿನಿ ಕ್ಯಾನ್ಸರ್ ಕೇರ್ ಸಂಸ್ಥೆ ಈ ಜವಾಬ್ದಾರಿಯನ್ನು ಹೊರಲಿದೆ. ಆಗಿಂದಾಗ್ಗೆ ಕ್ಯಾನ್ಸರ್ ಬಗ್ಗೆ ಅರಿವು ಮೂಡಿಸುವುದು, ಕ್ಯಾನ್ಸರ್ ರೋಗಿಗಳಿಗೆ ಆತ್ಮವಿಶ್ವಾಸ ತುಂಬುವುದು, ಆರ್ಥಿಕವಾಗಿ ದುರ್ಬಲರಾದವರಿಗೆ ಆರ್ಥಿಕ ಸಹಾಯ ನೀಡುವುದು ಈ ಕೇಂದ್ರದ ಪ್ರಮುಖ ಉದ್ದೇಶಗಳಾಗಿರುತ್ತವೆ ಎಂದರು.
ವಿಭಾಗವನ್ನು ಖ್ಯಾತ ಸಾಹಿತಿ ಕೆ.ಎಸ್.ಭಗವಾನ್ ಉದ್ಘಾಟಿಸಲಿದ್ದು , ಆದಿಚುಂಚನಗಿರಿ ಮೈಸೂರು ಶಾಖಾ ಮಠದ ಸ್ವಾಮೀಜಿಗಳಾದ ಸೋಮನಾಥಾನಂದ ಸ್ವಾಮೀಜಿಯವರು ದಿವ್ಯ ಸಾನ್ನಿಧ್ಯ ವಹಿಸಲಿದ್ದಾರೆ ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಭಾರತ್ ಕ್ಯಾನ್ಸರ್ ಆಸ್ಪತ್ರೆ ಅಧೀಕ್ಷರಾದ ಡಾ. ವಿಶ್ವೇಶ್ವರ್ , ಆಡಳಿತಾಧಿಕಾರಿ ನಿರ್ಮಲಾ ಉಪಸ್ಥಿತರಿದ್ದರು. (ಕೆ.ಎಸ್,ಎಸ್.ಎಚ್)