ಕರ್ನಾಟಕಪ್ರಮುಖ ಸುದ್ದಿ

ದುಬಾರೆ ಶಿಬಿರದಲ್ಲಿ ಆನೆ ದಾಳಿ ; ದಸರಾ ಆನೆ ಮಾವುತ ಅಣ್ಣು ಬಲಿ

ಮಡಿಕೇರಿ : ದಸರಾ ಆನೆ ದುರ್ಗಾಪರಮೇಶ್ವರಿ ಮಾವುತ ಅಣ್ಣು ಅವರು ಆನೆ ದಾಳಿಗೆ ಬಲಿಯಾಗಿದ್ದಾರೆ.

ದುಬಾರೆ ಆನೆ ಶಿಬಿರದಲ್ಲಿದ್ದ 45 ವರ್ಷದ ಅಣ್ಣು ಅವರು ತಮ್ಮ ಆನೆ ಹುಡುಕಾಟದಲ್ಲಿದ್ದಾಗ ಏಳು ವರ್ಷದ ಆನೆ “ಕಾರ್ತಿಕ್ ” ಅಣ್ಣು ಮೇಲೆ ದಾಳಿ ಮಾಡಿದೆ. ಗಾಯಗೊಂಡ ಅವರನ್ನು ಕೂಡಲೇ ಸಿದ್ದಾಪುರ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಅಣ್ಣು ಮೃತಪಟ್ಟಿದ್ದಾರೆ. ಅಣ್ಣು ಅವರು ಪತ್ನಿ ಮತ್ತು ಇಬ್ಬರು ಮಕ್ಕಳನ್ನು ಅಗಲಿದ್ದಾರೆ.

ವಿಷಯ ತಿಳಿದೊಡನೆ ಘಟನಾ ಸ್ಥಳಕ್ಕೆ ತೆರಳಿದ ಅರಣ್ಯಾಧಿಕಾರಿಗಳು ಪರಿಶೀಲನೆ ನಡೆಸಿದರು. ದುಬಾರೆ ಆನೆ ಶಿಬಿರದಲ್ಲಿ ಇಂತಹ ಪ್ರಕರಣ ಇದೇ ಮೊದಲು. ಮಾವುತರ ಅಥವಾ ಪ್ರವಾಸಿಗರ ಮೇಲೆ ಮೇಲೆ ಶಿಬಿರದ ಆನೆಗಳು ಈ ಹಿಂದೆ ಎಂದೂ ದಾಳಿ ಮಾಡಿರಲಿಲ್ಲ.

(ಎನ್‍.ಬಿ.ಎನ್‍)

Leave a Reply

comments

Related Articles

error: