ಮೈಸೂರು

ಭಾರೀ ಮಳೆಗೆ ಹಲವು ಮರಗಳು ಧರಾಶಾಹಿ; ಸಂಚಾರ ಅಸ್ತವ್ಯಸ್ತ

ಮೈಸೂರಿನಲ್ಲಿ ಸೋಮವಾರ ರಾತ್ರಿ ಸುರಿದ ಭಾರಿ ಬಿರುಗಾಳಿ ಮಳೆಗೆ 25ಕ್ಕೂ ಅಧಿಕ ಮರಗಳು ಹಾಗೂ ಕೊಂಬೆಗಳು ಧರಾಶಾಹಿಯಾಗಿವೆ.

ಇಲ್ಲಿನ ಜಯಲಕ್ಷ್ಮಿಪುರಂನಲ್ಲಿನ ವಿದ್ಯುತ್ ತಂತಿಗಳ ಮೇಲೆ ಮರದ ದೊಡ್ಡ ಕೊಂಬೆಯೊಂದು ಮುರಿದು ಬಿದ್ದಿತ್ತು. ಕೊಂಬೆಯನ್ನು ತೆರವುಗೊಳಿಸುವ ಕಾರ್ಯಾಚರಣೆಯಲ್ಲಿ ಪಾಲ್ಗೊಂಡ ಮಹಾನಗರಪಾಲಿಕೆ ಅಭಯ್ ತಂಡದ ರಘು ಎಂಬವರ ಕೈಗೆ ಗರಗಸ ತಾಗಿ ಗಾಯಗಳಾಗಿವೆ. ಕೆಲವು ಕಡೆ ರಸ್ತೆಯಲ್ಲಿಯೇ ಮರಗಳು ಉರುಳಿಬಿದ್ದ ಪರಿಣಾಮ ವಾಹನ ಸವಾರರು ಪರದಾಡಬೇಕಾದ ಸ್ಥಿತಿ ನಿರ್ಮಾಣವಾಗಿತ್ತು. ಕೆಲಕಾಲ ಸಂಚಾರ ಅಸ್ತವ್ಯಸ್ತವಾಯಿತು.

ವಿದ್ಯಾರಣ್ಯಪುರಂನ ಸಾರ್ವಜನಿಕ ವಿದ್ಯಾರ್ಥಿ ನಿಲಯದ ಮೇಲೆ ಎರಡು ಮರಗಳು ಉರುಳಿಬಿದ್ದಿದ್ದು ರಸ್ತೆಯಿಡೀ ಸಂಚಾರ ಕೆಲ ಕಾಲ ಸ್ಥಗಿತಗೊಂಡಿತ್ತು. ಕುವೆಂಪುನಗರದ ಗಗನಚುಂಬಿ ರಸ್ತೆ, ಪಂಚಮಂತ್ರರಸ್ತೆ, ಆರ್.ಎಂ.ಪಿ.ಕ್ವಾಟ್ರಸ್, ಮೈಸೂರು ವಿಶ್ವವಿದ್ಯಾಲಯ ಬಳಿಯ ರಸ್ತೆ ಸೇರಿದಂತೆ ಹಲವೆಡೆ ಮರಗಳು, ಮರದ ಕೊಂಬೆಗಳು ಧರೆಗುರುಳಿವೆ. ನಗರದಲ್ಲಿ 16.5ಮಿ.ಮೀ ಮಳೆಯಾಗಿದೆ. ಹವಾಮಾನ ಇಲಾಖೆಯ ವರದಿಯಂತೆ ಮಂಗಳವಾರ ಮತ್ತು ಬುಧವಾರವೂ ಕೂಡಾ ಮೈಸೂರಿನಾದ್ಯಂತ ಮಳೆಯಾಗುವ ಸಾಧ್ಯತೆಯಿದೆ. (ಕೆ.ಎಸ್-ಎಸ್.ಎಚ್)

Leave a Reply

comments

Related Articles

error: