ಕರ್ನಾಟಕಪ್ರಮುಖ ಸುದ್ದಿ

ಮಾರ್ಚ್ ಅಥವಾ ಏಪ್ರಿಲ್‌ನಿಂದ ಎಲ್ಲ ಪ್ಯಾಸೆಂಜರ್ ರೈಲು ಮೊದಲಿನಂತೆ ಸಂಚರಿಸುವ ನಿರೀಕ್ಷೆ

ರಾಜ್ಯ( ಹುಬ್ಬಳ್ಳಿ)ಫೆ.5:- ಇದೇ ಮಾರ್ಚ್ ಅಥವಾ ಏಪ್ರಿಲ್‌ನಿಂದ ಎಲ್ಲ ಪ್ಯಾಸೆಂಜರ್ ರೈಲುಗಳು ಮೊದಲಿನಂತೆ ಸಂಚರಿಸುವ ನಿರೀಕ್ಷೆ ಇದೆ. ರೈಲುಗಳ ಸಂಚಾರದ ಅಂತಿಮ ತೀರ್ಮಾನವನ್ನು ರೈಲ್ವೆ ಮಂಡಳಿ ಸದ್ಯದಲ್ಲೇ ತೆಗೆದುಕೊಳ್ಳಲಿದೆ.

ಲಾಕ್ ‌ಡೌನ್ ನಂತರ ರೈಲು ಸಂಚಾರ ನಿಧಾನವಾಗಿ ಸಾಮಾನ್ಯ ಸ್ಥಿತಿಗೆ ಮರಳುತ್ತಿದೆ. ದೇಶದಾದ್ಯಂತ ಶೇ. 55ರಷ್ಟು ಪ್ರಯಾಣಿಕರ ರೈಲುಗಳು ಸಂಚರಿಸುತ್ತಿದ್ದರೆ, ನೈಋತ್ಯ ರೈಲ್ವೆ ವ್ಯಾಪ್ತಿಯಲ್ಲಿ ಶೇ. 65ರಷ್ಟು ಸಂಚರಿಸುತ್ತಿವೆ ಎಂದು ಹುಬ್ಬಳ್ಳಿ ರೈಲ್ವೆ ವಿಭಾಗೀಯ ವ್ಯವಸ್ಥಾಪಕ ಅರವಿಂದ ಮಾಲಖೇಡೆ ತಿಳಿಸಿದ್ದಾರೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: