ದೇಶಪ್ರಮುಖ ಸುದ್ದಿ

ಕಾಮಾಂಧರ ಕೃತ್ಯಕ್ಕೆ ತಾಯಿಯಾದ 14 ವರ್ಷದ ಬಾಲಕಿ

ರಾಯಚೂರು : 14 ವರ್ಷದ ಬಾಲಿಯೊಬ್ಬಳು ಕಾಮುಕರ ಮೋಸಕ್ಕೆ ಬಲಿಯಾಗಿ ಗಂಡು ಮಗುವಿಗೆ ಜನ್ಮ ನೀಡಿ ತಾಯಿಯಾದ ಘಟನೆ ರಾಯಚೂರಿನಲ್ಲಿ ಜರುಗಿದೆ.

ಈ ಹೃಯದ ವಿದ್ರಾವಕ ಘಟನೆ ನಡೆದಿದ್ದು ರಾಯಚೂರು ಜಿಲ್ಲೆಯ ಮಾನ್ವಿ ತಾಲೂಕಿನ ಗಣದಿನ್ನಿ ಗ್ರಾಮದಲ್ಲಿ. ಬಡ ಕೂಲಿಕಾರ್ಮಿಕರರ ಮಗಳಾದ 14 ವರ್ಷದ ಬಾಲಕಿಯನ್ನು ಅದೇ ಗ್ರಾಮದ 17 ವರ್ಷದ ವೀರೇಶ ನಾಯಕ, ಮತ್ತು 21 ವರ್ಷದ ಶಿವರಾಜ ಬೋವಿ ಎನ್ನುವವರು ನಿರಂತರವಾಗಿ ಅತ್ಯಾಚಾರ ಬಳಸಿಕೊಂಡಿದ್ದಾರೆ.

ತಾಯಿಗೆ ಈ ವಿಚಾರ ತಿಳಿಯುವಷ್ಠರಲ್ಲಿ ಬಾಲಿಕಿ ಗರ್ಭಿಣಿಯಾಗಿದ್ದಾಳೆ. ನಂತರ ಗ್ರಾಮದಲ್ಲಿ ಪಂಚಾಯತ್ ನಡೆಸಿ ನ್ಯಾಯ ಕೊಡಿಸುವ ಪ್ರಯತ್ನಗಳು ನಡೆದರು ಯಾವುದೇ ಫಲ ಸಿಗಲಿಲ್ಲ. ಕೊನೆಗೆ ಈ ಬಾಲಕಿಯ ತಾಯಿ ಮಗಳೊಂದಿಗೆ ಸಿರವಾರ ಪೊಲೀಸ್ ಠಾಣೆಯಲ್ಲಿ ಅತ್ಯಾಚಾರದ ಪ್ರಕರಣ ದಾಖಲಿಸಿದ್ದಾಳೆ. ದೂರು ದಾಖಲಿಸಿಕೊಂಡ ಪೊಲೀಸರು ಆರೋಪಿಗಳಾದ ವೀರೇಶ ಮತ್ತು ಶಿವರಾಜನ್ನು ಬಂಧಿಸಿದ್ದು, ನ್ಯಾಯಾಂಗ ವಶಕ್ಕೆ ಒಪ್ಪಿಸಲಾಗಿದೆ.

14 ವರ್ಷದ ಬಾಲಕಿ ರಾಯಚೂರಿನ ರಿಮ್ಸ್ ಆಸ್ಪತ್ರೆಯಲ್ಲಿ ಗಂಡು ಮಗುವಿಗೆ ಜನ್ಮ ನೀಡಿದ್ದಾಳೆ. ಬಾಲಕಿಗೆ ತಂದೆಯಿಲ್ಲದ ಕಾರಣ ತಾಯಿಯೇ ಎಲ್ಲ ಕಾಳಜಿ ಮಾಡಬೇಕು. ಆದರೆ ಮೊದಲೇ ಬಡತನದಿಂದ ಬಳಲುತ್ತಿರುವ ಈ ಬಾಲಕಿಯ ತಾಯಿ ಸಮಾಜಕ್ಕೆ ಹೆದರಿ ತಾಯಿ-ಮಗುವನ್ನು ಮನೆಗೆ ಕರೆದುಕೊಂಡು ಹೋಗಲು ಒಪ್ಪುತ್ತಿಲ್ಲ.

ಈ ಕಾರಣದಿಂದ ಕಂಗಾಲಾಗಿರು ತಾಯಿ-ಮಗುವಿಗೆ ರಾಯಚೂರಿನ ಮಕ್ಕಳ ರಕ್ಷಣಾ ಘಟಕದಲ್ಲಿ ಆಶ್ರಯ ನೀಡಲಾಗುತ್ತಿದೆ ಎಂದು ಮಕ್ಕಳ ರಕ್ಷಣಾ ಸಮಿತಿ ಅಧ್ಯಕ್ಷೆ ಡಾ.ಜಯಶ್ರಿ ಚನ್ನಾಳ ತಿಳಿಸಿದ್ದಾರೆ.

(CT)

Leave a Reply

comments

Related Articles

error: