ಮೈಸೂರು

ಚಿಂತಕ ಪ್ರೊ.ಕೆ.ಎಸ್. ಭಗವಾನ್ ಮುಖಕ್ಕೆ ಮಸಿ ಬಳಿದಿರುವುದು ಖಂಡನೀಯ : ರೇಖಾ ಶ್ರೀನಿವಾಸ್

ಮೈಸೂರು,ಫೆ.5:- ವಕೀಲೆಯೊಬ್ಬರು ಕೋರ್ಟ್ ಆವರಣದಲ್ಲೇ ಪ್ರಗತಿಪರ ಚಿಂತಕ ಪ್ರೊ.ಕೆ.ಎಸ್.ಭಗವಾನ್ ಅವರ ಮುಖಕ್ಕೆ ಮಸಿ ಬಳಿದಿರುವುದನ್ನು ಸಾಮಾಜಿಕ ಹೋರಾಟಗಾರ್ತಿ ರೇಖಾ ಶ್ರೀನಿವಾಸ್ ಖಂಡಿಸಿದ್ದಾರೆ.
ಈ ಕುರಿತು ಮಾಧ್ಯಮ ಹೇಳಿಕೆ ನೀಡಿರುವ ಅವರು ಒಬ್ಬ ವಕೀಲೆಯಾಗಿ ವೃತ್ತಿ ಧರ್ಮಕ್ಕೆ ವಿರೋಧವಾದ ಕೆಲಸ ಇದು. ಸೈದ್ಧಾಂತಿಕ ಭಿನ್ನಾಭಿಪ್ರಾಯಗಳಿದ್ದರೆ ಅದನ್ನು ನ್ಯಾಯಾಲಯದಲ್ಲಿಯೇ ಹೋರಾಟ ಮಾಡಬೇಕೇ ಹೊರತು ಹೀಗೆ ಅಸಹ್ಯಕರವಾದ ರೀತಿಯಲ್ಲಿ ಮಸಿ ಬಳಿಯುವಂತಹ ಕೆಲಸ ಮಾಡಬಾರದು.ಇದು ಹೆಣ್ಣು ಕುಲಕ್ಕೆ ಮಾಡಿದ ಅವಮಾನ. ಭಾರತೀಯ ಸಂಸ್ಕೃತಿಯನ್ನೇ ವಿನಾಶ ಮಾಡುವ ಬಗೆ. ಇದು ಹೇಡಿಗಳು ಮಾಡುವ ಕೆಲಸ ಎಂದು ಟೀಕಿಸಿದ್ದಾರೆ .
ಕೃತ್ಯದ ಹಿಂದೆ ಜನಪ್ರಿಯತೆ ಗಳಿಸಬೇಕೆಂಬ ಉದ್ದೇಶ ಬಿಟ್ಟರೆ ಬೇರೇನೂ ಇಲ್ಲ .ಈಗಾಗಲೇ ಮನುವಾದವನ್ನು ಮೈಮೇಲೆ ಎಳೆದುಕೊಂಡಿರುವ ವಕೀಲೆ ಮೀರಾ ಪ್ರಧಾನಿ ನರೇಂದ್ರ ಮೋದಿ ಗಮನ ಸೆಳೆಯಲು ತಂತ್ರವನ್ನು ಮಾಡುತ್ತಿದ್ದಾಳೆ ಅಷ್ಟೇ ಎಂದಿದ್ದಾರೆ.
ಸಿದ್ಧಾಂತಗಳು ವಿರೋಧವಾಗಿದ್ದರೆ ಅದನ್ನು ಖಂಡಿಸಲು ಬೇರೆ ಬೇರೆ ಮಾರ್ಗಗಳಿವೆ. ಚರ್ಚೆಗೆ ಆಹ್ವಾನಿಸಬಹುದು ಅಥವಾ ಸಾಮಾಜಿಕ ಜಾಲತಾಣಗಳ ಮೂಲಕವೇ ಕೇಳಬಹುದು. ಆದರೆ ಪ್ರಚಾರಕ್ಕಾಗಿ ಈ ರೀತಿ ಮಾಡಿರುವುದು ಅವಿವೇಕದ, ಮೂರ್ಖತನದ ಪರಮಾವಧಿ ಎಂದು ಟೀಕಿಸಿದ್ದಾರೆ. ಧರ್ಮದ ಪಿತ್ತ ನೆತ್ತಿ ಗೇರಿದವರು ಮಾತ್ರ ಹೀಗೆ ನಡೆದುಕೊಳ್ಳಲು ಸಾಧ್ಯ. ನ್ಯಾಯಾಲಯ ವಕೀಲೆ ವಿರುದ್ಧ ಸ್ವಯಂ ಕೇಸ್ ದಾಖಲಿಸಿಕೊಂಡು ವಿಚಾರಣೆಗೊಳಪಡಿಸಬೇಕೆಂದು ಅವರು ಆಗ್ರಹಿಸಿದ್ದಾರೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: