ದೇಶ

ಹೋಟೆಲ್ ಉದ್ಯಮಕ್ಕೆ ಬಾಬಾ ರಾಮದೇವ್

ಪತಂಜಲಿ ಆಯುರ್ವೇದಿಕ್ ಉತ್ಪನ್ನಗಳನ್ನು ಮಾರುಕೆಟ್ಟೆಗೆ ತಂದಿರುವ ಯೋಗ ಗುರು ಬಾಬಾ ರಾಮದೇವ್ ಇದೀಗ ಹೋಟೆಲ್ ಆರಂಭಿಸಿದ್ದಾರೆ. ಹರಿಯಾಣದ ಚಂಡೀಗಢ ಸಮೀಪ ಜಿರಾಕ್ಪುರದಲ್ಲಿ “ಪೌಷ್ಟಿಕ ರೆಸ್ಟೋರೆಂಟ್ ” ಹೆಸರಿನಲ್ಲಿ ಮೊದಲ ಹೋಟೆಲ್ ಆರಂಭವಾಗಿದೆ.
ಕೇವಲ ಸಾಸ್ಥ್ಯಾಹಾರವನ್ನು ನೀಡುವ ಈ ಹೋಟೆಲ್, ಪೌಷ್ಟಿಕ ಆಹಾರವನ್ನು ಕುರಿತು ಜನರಲ್ಲಿ ಅರಿವು ಮೂಡಿಸುವುದಾಗಿದೆ.

ಗ್ರಾಹಕರು ತಮಗೆ ನೀಡುವ ಆಹಾರದ ಬಗ್ಗೆ ಎಲ್ಲ ಮಾಹಿತಿಯನ್ನು ಪಡೆದುಕೊಳ್ಳಬಹುದಾಗಿದೆ. ಆಹಾರದ ಔಶಧೀಯ ಗುಣ, ಉತ್ತಮ ಆರೋಗ್ಯಕ್ಕೆ ಯಾವ ರೀತಿಯ ಆಹಾರ ಉತ್ತಮ ಮತ್ತು ಋತುಮಾನಕ್ಕನುಗುಣವಾಗಿ ಎಂತಹ ಆಹಾರ ಸೇವಿಸಬೇಕು ಎಂಬುದರ ಮಾಹಿತಿಯನ್ನೂ ಇಲ್ಲಿ ನೀಡಲಾಗುತ್ತದೆ.

ಬಾಬಾ ರಾಮದೇವ್ ಜತೆ ಅವರ ಶಿಷ್ಯ ಬಾಲಕೃಷ್ಣ ಅವರ ಭಾವ ಚಿತ್ರಗಳನ್ನು ರೆಸ್ಟೋರೆಂಟ್‍ನಲ್ಲಿ ಅಂಟಿಸಲಾಗುತ್ತದೆ. ಮುಂಬರುವ ದಿನಗಳಲ್ಲಿ ದೇಶದ ಎಲ್ಲ ಕಡೆಗಲ್ಲಿ ಪೌಸ್ಟಿಕ್ ರೆಸ್ಟಾರೆಂಟ್ ಆರಂಭವಾಗಲಿವೆ.

(CT)

Leave a Reply

comments

Related Articles

error: