ದೇಶಪ್ರಮುಖ ಸುದ್ದಿ

ಪ್ರಚಾರಾಂದೋಲನ ‘ಪರಿವರ್ತನಾ ಯಾತ್ರೆ’ ಗೆ ಚಾಲನೆ ನೀಡಲಿರುವ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ

ದೇಶ( ಕೊಲ್ಕತ್ತಾ)ಫೆ.6:- ಪಶ್ಚಿಮ ಬಂಗಾಳದಲ್ಲಿ ತೃಣ ಮೂಲ ಕಾಂಗ್ರೆಸ್ ಪಕ್ಷದ ದಶಕದ ಆಳ್ವಿಕೆಯನ್ನು ಅಂತ್ಯಗೊಳಿಸುವ ನಿಟ್ಟಿನಲ್ಲಿ ಪಣ ತೊಟ್ಟಿರುವ ಬಿಜೆಪಿ ಪ್ರಚಾರಾಂದೋಲನ ‘ಪರಿವರ್ತನಾ ಯಾತ್ರೆ’ ಆಯೋಜಿಸಿದ್ದು ಇಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ. ಪಿ. ನಡ್ಡಾ ಚಾಲನೆ ನೀಡಲಿದ್ದಾರೆ.

ಐದು ಹಂತಗಳಲ್ಲಿ ನಡೆಯಲಿರುವ ಯಾತ್ರೆ, ಪಶ್ಚಿಮ ಬಂಗಾಳ ರಾಜ್ಯದಲ್ಲಿನ ಎಲ್ಲಾ 294 ವಿಧಾನಸಭಾ ಕ್ಷೇತ್ರಗಳಲ್ಲೂ ಸಾಗಲಿದೆ ಎಂದು ಪಕ್ಷ ಹೇಳಿಕೆಯಲ್ಲಿ ತಿಳಿಸಿದೆ. ಪಶ್ಚಿಮ ಬಂಗಾಳ ರಾಜ್ಯದಲ್ಲಿ ಏಪ್ರಿಲ್- ಮೇ ತಿಂಗಳಲ್ಲಿ ವಿಧಾನಸಭಾ ಚುನಾವಣೆ ನಡೆಯುವ ಸಾಧ್ಯತೆಯಿದೆ.

ಪರಿವರ್ತನಾ ಯಾತ್ರೆಗೂ ಮುನ್ನ, ಮಾಲ್ಡಾ ಜಿಲ್ಲೆಯ ಶಾಹಪುರದಲ್ಲಿ 3 ಸಾವಿರ ರೈತರ ಸೇರ್ಪಡೆ ಸೇರಿದಂತೆ ಅನೇಕ ಕಾರ್ಯಕ್ರಮಗಳಲ್ಲಿ ಜೆ. ಪಿ. ನಡ್ಡಾ ಪಾಲ್ಗೊಳ್ಳಲಿದ್ದಾರೆ. ನಂತರ ಮಾಲ್ಡಾದಲ್ಲಿನ ಫೋರಾ ರಸ್ತೆಯಿಂದ ರವೀಂದ್ರನಾಥ್ ಠ್ಯಾಗೂರ್ ಪ್ರತಿಮೆವರೆಗೂ ಗ್ರ್ಯಾಂಡ್ ರೋಡ್ ಶೋ ನಡೆಸಲಿದ್ದಾರೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.

ಭಕ್ತಿ ಸುಧಾರಣಾ ಆಂದೋಲನದ ಶ್ರೇಷ್ಠ ಸಂತ ಚೈತನ್ಯ ಮಹಾಪ್ರಭು ಪ್ರತಿಮೆಗೂ ಜೆ. ಪಿ. ನಡ್ಡಾ ಗೌರವ ನಮನ ಸಲ್ಲಿಸಲಿದ್ದಾರೆ ಎಂದು ತಿಳಿದುಬಂದಿದೆ. (ಏಜೆನ್ಸೀಸ್,ಎಸ್.ಎಚ್)

Leave a Reply

comments

Related Articles

error: