ಮೈಸೂರು

ಪರಿಪೂರ್ಣ ಜೀವನಕ್ಕಾಗಿ ಯೋಗದ ಕುರಿತು ಡಾ. ಅಮೃತಾನಂದ ಸ್ವಾಮಿಗಳವರಿಂದ ಉಪನ್ಯಾಸ

ಮೈಸೂರು,ಫೆ.6:- ಜೆಎಸ್ಎಸ್ ಮಹಾವಿದ್ಯಾಪೀಠ ಮತ್ತು ಶ್ರೀ ಶಿವರಾತ್ರೀಶ್ವರ ಧಾರ್ಮಿಕ ದತ್ತಿಯ ಆಶ್ರಯದಲ್ಲಿ ಆನ್ ಲೈನ್ (ವರ್ಚುವಲ್) ಮೂಲಕ 2020ರ ಡಿಸೆಂಬರ್ ತಿಂಗಳಿನಿಂದ ವಿಶೇಷ ಉಪನ್ಯಾಸ ಮಾಲೆಯ ಕಾರ್ಯಕ್ರಮಗಳನ್ನು ಪ್ರತಿ ಸೋಮವಾರ ಹಮ್ಮಿಕೊಳ್ಳಲಾಗಿದೆ.
ಕಲೆ, ಸಾಹಿತ್ಯ, ಸಂಸ್ಕೃತಿ, ವಿಜ್ಞಾನ, ತಂತ್ರಜ್ಞಾನ, ಧರ್ಮ, ಅಧ್ಯಾತ್ಮ. ಯೋಗ, ಆರೋಗ್ಯ, ಜೀವನಶೈಲಿ ಮುಂತಾದ ವಿಷಯಗಳು ಮತ್ತು ಪ್ರಚಲಿತ ವಿದ್ಯಮಾನಗಳನ್ನು ಕುರಿತು ದೇಶ ಮತ್ತು ವಿದೇಶದ ವಿವಿಧ ಸಂಪನ್ಮೂಲ ವ್ಯಕ್ತಿಗಳಿಂದ ಉಪನ್ಯಾಸಗಳನ್ನು ಆಯೋಜಿಸಲಾಗಿದೆ.
ಜ್ಞಾನ ವಾರಿಧಿ-10 ಡಿಜಿಟಲ್ ಸಾಪ್ತಾಹಿಕ ಉಪನ್ಯಾಸ ಕಾರ್ಯಕ್ರಮವು 8.2.2021ರ ಸೋಮವಾರ ಸಂಜೆ 6 ಗಂಟೆಗೆ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮಿಗಳವರ ದಿವ್ಯಸಾನ್ನಿಧ್ಯದಲ್ಲಿ ನಡೆಯಲಿದೆ. ಮಹಾರಾಷ್ಟ್ರದ ಬಾಲಗಾಂವನ ಶ್ರೀ ಗುರುದೇವಾಶ್ರಮದ ಡಾ. ಅಮೃತಾನಂದ ಮಹಾಸ್ವಾಮಿಗಳು ‘ಪರಿಪೂರ್ಣ ಜೀವನಕ್ಕಾಗಿ ಯೋಗ’ ಕುರಿತು ಆನ್ ಲೈನ್ ನಲ್ಲಿ ಉಪನ್ಯಾಸ ನೀಡಲಿದ್ದಾರೆ.
ಈ ಉಪನ್ಯಾಸವನ್ನು Yotube http://Youtube.com/c/JSSMahavidyapeethaonline https://www.facebook.com/JSSMVP, http://jssonline.org ಲಿಂಕ್ ಗಳ ಮೂಲಕ ಕೇಳಬಹುದಾಗಿದೆ. ಆಸಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯಕ್ರಮವನ್ನು ವೀಕ್ಷಿಸಿ ಸದುಪಯೋಗ ಪಡೆದುಕೊಳ್ಳಬೇಕಾಗಿ ಕೋರಲಾಗಿದೆ. (ಜಿ.ಕೆ,ಎಸ್.ಎಚ್)

Leave a Reply

comments

Related Articles

error: