ಕರ್ನಾಟಕಪ್ರಮುಖ ಸುದ್ದಿಮೈಸೂರು

ರೈತರು ಬೆಳೆದ ಬೆಳೆಯನ್ನು ಮುಕ್ತವಾಗಿ ಮಾರಲು ಸ್ವಾತಂತ್ರ್ಯ ನೀಡುತ್ತಿದ್ದೇವೆ : ಕೇಂದ್ರ ಸಚಿವ ಸದಾನಂದಗೌಡ

ಪಾಪ್ ಗಾಯಕಿ ರಿಹನ್ನಾ ಗದ್ದೆಯ ಮುಂದೆ ನಿಂತು ಫೋಟೋ ತೆಗೆಸಿಕೊಂಡು ಹೋಗಿರಬಹುದು : ಸಚಿವರ ವ್ಯಂಗ್ಯ

ಮೈಸೂರು,ಫೆ.6:- ದೇಶಕ್ಕೆ ಸ್ವಾತಂತ್ರ್ಯ ಬಂದಿದೆ. ಆದರೆ ರೈತನಿಗೆ ಇನ್ನೂ ಸ್ವಾತಂತ್ರ್ಯ ಸಿಕ್ಕಿಲ್ಲ. ರೈತರು ಬೆಳೆದ ಬೆಳೆಯನ್ನು ಮುಕ್ತವಾಗಿ ಮಾರಲು ಸ್ವಾತಂತ್ರ್ಯ ನೀಡುತ್ತಿದ್ದೇವೆ ಎಂದು ಕೇಂದ್ರ ಸಚಿವ ಸದಾನಂದಗೌಡ ಹೇಳಿದರು.
ಮೈಸೂರಿನಲ್ಲಿಂದು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಸಚಿವರು ರೈತರು ಈಗ ಸರ್ಕಾರದ ಕೈಗೊಂಬೆಯಾಗಿದ್ದಾರೆ. ಬೇಕಾದವರಿಗೆ ಬೆಳೆ ಮಾರಾಟ ಮಾಡಲು ಸ್ವಾತಂತ್ರ್ಯ ಇಲ್ಲವಾಗಿದೆ. ತನ್ನ ಬೆಳೆಗೆ ಯಾರಾದರೂ ಹೆಚ್ಚು ಬೆಲೆ ಕೊಡ್ತಾರೆ ಅಂದ್ರೆ ಕೊಡಲಿ ಬಿಡಿ. ಸುಮ್ಮನೆ ಯಾಕೇ ಹಠ ಮಾಡ್ತೀರಾ ಎಂದು ಪ್ರಶ್ನಿಸಿದರು. ರೈತರಿಗೆ ಬೆಂಬಲ ನೀಡಿದ್ದು ಮೋದಿ ಸರ್ಕಾರ. ರೈತರು ಎಪಿಎಂಸಿ ಕೈಗೊಂಬೆಯಾಗಿ ಇರೋದು ಬೇಡ. ರೈತರು ಸ್ವತಂತ್ರವಾಗಿ ಬೆಳೆ ಮಾರಾಟ ಮಾಡಲು ಅವಕಾಶ ಕೊಟ್ಟಿದ್ದೇವೆ. ಬಂಡವಾಳ ಶಾಹಿಗಳ ಕೈಗೊಂಬೆಯಾಗ್ತಾರೆ ಅನ್ನೋದು ಸುಳ್ಳು. ಪಟ್ಟಭದ್ರ ಹಿತಾಸಕ್ತಿಯಿಂದ ಈ ಪ್ರತಿಭಟನೆ ನಡೆಯುತ್ತಿದೆ. ಕೃಪಾಪೋಷಿತ ಜನರ ಪ್ರೇರಣೆಯಿಂದ ರೈತರು ಪ್ರತಿಭಟನೆ ಮಾಡುತ್ತಿದ್ದಾರೆ. ನಾವು ಕಾಂಪ್ರಮೈಸ್ ಆಗಿದ್ದೀವಿ. ಮಾತುಕತೆಗೂ ಸಿದ್ದರಿದ್ದೇವೆ,ಆದರೆ ರೈತರೇ ಹಠ ಮಾಡುತ್ತಿದ್ದಾರೆ ಎಂದು ಹೇಳಿದರು.
ಪಾಪ್ ಸಿಂಗರ್ ರಿಹನ್ನಾ ಏನಾದ್ರು ಭತ್ತದ ಗದ್ದೆ ನೋಡಿದ್ದಾರಾ? ಬಹುಶಃ ಅವರು ಭತ್ತದ ಗದ್ದೆ ಮುಂದೆ ನಿಂತು ಪೋಟೋ ತೆಗೆಸಿಕೊಂಡು ಹೋಗಿರಬಹುದು ಎಂದು ವ್ಯಂಗ್ಯವಾಡಿದರು. ರಿಹನ್ನಾ ಏನು ರೈತರ ಕಷ್ಟದ ಬಗ್ಗೆ ಮಾತನಾಡೋದು. ರಿಹನ್ನಾ ಗೆ ರೈತರ ಶ್ರಮದ ಬಗ್ಗೆ ಏನು ಗೊತ್ತಿದೆ. ರೈತರು ಮಾರಾಟ ಹೇಗೆ ಮಾಡ್ತಾರೆ ಅಂತ ರಿಹನ್ನಾಗೆ ಗೊತ್ತಾ?. ವಿದೇಶಿ ಕೈಗೊಂಬೆಯಾಗಿ ಅವರು ಈ ರೀತಿ ಹೇಳಿಕೆ ಕೊಡ್ತಿದ್ದಾರೆ. ಅವರು ಯಾವತ್ತಾದರೂ ಭತ್ತ ಗದ್ದೆಯನ್ನಾದ್ರು ನೋಡಿದ್ದಾರಾ ಹೇಳಲಿ ಎಂದು ಪಾಪ್ ಗಾಯಕಿ ರಿಹನ್ನಾ ವಿರುದ್ಧ ಕಿಡಿಕಾರಿದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: