ಮನರಂಜನೆ

ಒಂದು ಸಾವಿರ ಕೋಟಿ ವೆಚ್ಚದಲ್ಲಿ ತೆರೆಗೆ ಬರಲಿರುವ ಮಹಾಭಾರತ !

ಭಾರತ ಚಿತ್ರರಂಗದ ಅತಿದೊಡ್ಡ ಸಿನಿಮಾವಾಗಲಿರುವ ‘ದಿ ಮಹಾಭಾರತ’ ಸಿನಿಮಾಗೆ ಯುಎಇ ಮೂಲದ ಕನ್ನಡಿಗ ಉದ್ಯಮಿ ಬಿ.ಆರ್.ಶೆಟ್ಟಿ ಬರೋಬ್ಬರಿ ಒಂದು ಸಾವಿರ ಕೋಟಿ ರೂ. ಹೂಡಿಕೆ ಮಾಡಲಿದ್ದಾರೆ.

ಈ ಸಿನಿಮಾ 2018 ರಲ್ಲಿ  ಚಿತ್ರೀಕರಣ ಪ್ರಾರಂಭವಾಗಿ 2020 ಕ್ಕೆ ತೆರೆಕಾಣಲಿದೆ. ಸಾವಿರ ಕೋಟಿಯ ಚಿತ್ರದಲ್ಲಿ ಪ್ರತಿಷ್ಠಿತ ಆಸ್ಕರ್ ಪ್ರಶಸ್ತಿ ಪುರಸ್ಕೃತ ತಂತ್ರಜ್ಞರು ಇರಲಿದ್ದಾರೆ. ಬಾಹುಬಲಿ ಸಿನಿಮಾ ರೀತಿಯಲ್ಲಿಯೇ ಎರಡು ಭಾಗಗಳಲ್ಲಿ ಚಿತ್ರ ಬರುವುದು ಪಕ್ಕಾ ಆಗಿದೆ. 2020 ರಲ್ಲಿ ಚಿತ್ರ ಬಿಡುಗಡೆಯಾದ ಬಳಿಕ 90 ದಿನಗಳಲ್ಲಿ ಮಹಾಭಾರತ ಭಾಗ-2 ಸಿನಿಮಾ ತೆರೆಗೆ ಬರಲಿದೆ. ಕನ್ನಡ, ತಮಿಳು, ತೆಲುಗು,ಮಲೆಯಾಳಂ, ಹಿಂದಿ, ಇಂಗ್ಲೀಷ್ ಭಾಷೆಗಳಲ್ಲಿ ಚಿತ್ರೀಕರಣವಾಗಲಿದ್ದು, ಭಾರತದ ಪ್ರಮುಖ ಭಾಷೆಗಳೂ ಸೇರಿದಂತೆ 100 ಭಾಷೆಗಳಲ್ಲಿ ಡಬ್ ಆಗಲಿದೆ. ವಿಶ್ವದಾದ್ಯಂತ ಮೂರು ಬಿಲಿಯನ್ ಜನರನ್ನು ತಲುಪುವ ನಿರೀಕ್ಷೆಯಿದೆ.

ಅದ್ದೂರಿ ಬಜೆಟ್ ನ ಈ ಸಿನಿಮಾವನ್ನು ಮಲೆಯಾಳಂನ ಖ್ಯಾತ ನಿರ್ದೇಶಕ ಶ್ರೀಕುಮಾರ್ ಮೆನನ್ ನಿರ್ದೇಶಿಸಲಿದ್ದು, ಮಲೆಯಾಳಂನ ಲೆಜೆಂಡರಿ ನಟ ಮೋಹನ್ ಲಾಲ್, ಬಿಟೌನ್ ಕಿಂಗ್ ಖಾನ್ ಶಾರೂಕ್ ಪ್ರಮುಖ ಪಾತ್ರಗಳಲ್ಲಿ ನಟಿಸಲಿದ್ದಾರೆ. ಇಡೀ ಚಿತ್ರಕಥೆ ಭೀಮನ ಸುತ್ತವೇ ತಿರುಗಲಿದೆ. (ಎಲ್-ಜಿ)

Leave a Reply

comments

Related Articles

error: