ಮೈಸೂರು

ಚುಟುಕು ಬ್ರಹ್ಮ ಡಾ.ಎಂ.ಅಕಬರ ಅಲಿ ಹೆಸರನ್ನು ನಿರ್ಧಾರಿತ ಉದ್ಯಾನವನಕ್ಕೆ ನಾಮಕರಣ ಮಾಡುವಂತೆ ಮನವಿ

ಮೈಸೂರು,ಫೆ.6:- ಚುಟುಕು ಬ್ರಹ್ಮ ಡಾ.ಎಂ.ಅಕಬರ ಅಲಿ ಅವರ ಹೆಸರನ್ನು ನಿರ್ಧಾರಿತ ಉದ್ಯಾನವನಕ್ಕೆ ನಾಮಕರಣ ಮಾಡುವಂತೆ ಅರಸು ಪ್ರತಿಮೆ ಪ್ರತಿಷ್ಠಾನ ಸಮಿತಿ ವತಿಯಿಂದ ಮೈಸೂರು ಮಹಾನಗರ ಪಾಲಿಕೆಯ ಆಯುಕ್ತ ಗುರುದತ್ ಹೆಗಡೆ ಅವರಿಗೆ ಮನವಿ ಸಲ್ಲಿಸಲಾಯಿತು.
ಹಲವಾರು ಪ್ರಶಸ್ತಿಗಳಿಗೆ ಭಾಜನರಾದ ಎಂ.ಅಕಬರ ಅಲಿ ಅವರ ಹೆಸರನ್ನು ಚಿರಸ್ಥಾಯಿಗೊಳಿಸುವ ಸಲುವಾಗಿ ಕುವೆಂಪುನಗರದ ಕಾಮಾಕ್ಷಿ ಆಸ್ಪತ್ರೆಯ ಹಿಂಭಾಗದಲ್ಲಿರುವ ಉದ್ಯಾನವನಕ್ಕೆ ಅವರ ಹೆಸರನ್ನು ಇಡುವ ನಿರ್ಧಾರವನ್ನು ಈಗಾಗಲೇ ಮಹಾನಗರ ಪಾಲಿಕೆಯಲ್ಲಿ ಮಹಾಪೌರರ ಮತ್ತು ಸದಸ್ಯರ ಒಮ್ಮತದಲ್ಲಿ ತೀರ್ಮಾನಿಸಲಾಗಿದ್ದು ಆದರೂ ಕೂಡ ಇನ್ನೂ ಅವರ ಹೆಸರನ್ನು ಇಡದಿರುವುದು ಸಾಹಿತ್ಯ ಲೋಕಕ್ಕೆ ದ್ರೋಹ ಬಗೆದಂತಿದೆ. ಹಿರಿಯ ಸಾಹಿತಿಯನ್ನು ಅವಮಾನಿಸಿದಂತಿದೆ. ಈಗಲಾದರೂ ತಡಮಾಡದೆ ಅಕಬರ ಅಲಿ ಅವರ ಹೆಸರನ್ನು ಅವರ ಜನ್ಮದಿನ ಮಾರ್ಚ್ 3ರೊಳಗೆ ಉದ್ಯಾನವನಕ್ಕೆ ಡಾ.ಎಂ.ಅಕಬರ ಅಲಿ ನಾಮಕರಣ ಮಾಡುವಂತೆ ಅರಸು ಪ್ರತಿಮೆ ಪ್ರತಿಷ್ಠಾನದ ಗೌರವಾಧ್ಯಕ್ಷ ಎಂ.ಚಂದ್ರಶೇಖರ್ ವಿನಂತಿಸಿದರು.
ಈ ಸಂದರ್ಭ ಪ್ರತಿಷ್ಠಾನ ಸಮಿತಿ ಅಧ್ಯಕ್ಷ ಜಾಕೀರ್ ಹುಸೇನ್, ಕಸಾಪ ಮಾಜಿ ಜಿಲ್ಲಾಧ್ಯಕ್ಷ ಮಡ್ಡಿಕೇರೆ ಗೋಪಾಲ್, ಜಿಲ್ಲಾ ಕಸಾಪ ಅಧ್ಯಕ್ಷ ಡಾ.ವೈ.ಡಿ.ರಾಜಣ್ಣ, ಕದಂಬ ರಂಗವೇದಿಕೆ ಅಧ್ಯಕ್ಷ ರಾಜಶೇಖರ್ ಕದಂಬ, ರಾಜ್ಯ ಪ್ರಧಾನ ಸಂಚಾಲಕ ಡೈರಿ ವೆಂಕಟೇಶ್, ಜಿಲ್ಲಾ ನಗರ ಸಂಚಾಲಕ ಎ.ಹೆಚ್.ಕೃಷ್ಣೇಗೌಡ, ಚುಟುಕು ಕೇಂದ್ರ ಸಾಹಿತ್ಯ ಪರಿಷತ್ ನ ಡಾ.ಎಂ.ಜಿ.ಆರ್.ಅರಸ್ ಮತ್ತಿತರರಿದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: