ಕರ್ನಾಟಕಪ್ರಮುಖ ಸುದ್ದಿಮೈಸೂರು

ಜಂಬೂ ಸವಾರಿ ವೀಕ್ಷಣೆಗೆ ಕಟ್ಟಡ ಏರುವಂತಿಲ್ಲ!

ಈ ಬಾರಿ ಜಂಬೂ ಸವಾರಿಯನ್ನು ನೋಡುವವರು ಕಟ್ಟಡವನ್ನು ಏರುವಂತಿಲ್ಲ. ರಸ್ತೆಯ ಇಕ್ಕೆಲಗಳಲ್ಲಿ ನಿಂತೇ ನೋಡಬೇಕು ಹಾಗಂತ ಜಿಲ್ಲಾಡಳಿತವೇ ತಿಳಿಸಿದೆ. ಅದಕ್ಕೆ ಕಾರಣವೂ ಇದೆ. ಇತ್ತೀಚೆಗಷ್ಟೇ ಪಾರಂಪರಿಕ ಕಟ್ಟಡವಾದ ದೇವರಾಜ ಅರಸು ಮಾರುಕಟ್ಟೆ ಧರಾಶಾಹಿಯಾಗಿತ್ತು. ಮೈಸೂರಿನಲ್ಲಿರುವುದು ಬಹುತೇಕ ಹಳೆಯ ಪಾರಂಪರಿಕ ಕಟ್ಟಡಗಳೇ ಆಗಿರುವುದರಿಂದ ಯಾವುದೇ ಅನಾಹುತಗಳು ಸಂಭವಿಸಬಾರದೆಂದು ಜಿಲ್ಲಾಡಳಿತ ಮುಂಜಾಗ್ರತಾ ಕ್ರಮವಾಗಿ ಈ ಕ್ರಮ ಕೈಗೊಂಡಿದೆ.

ಜಂಬೂ ಸವಾರಿಯು  ಅರಮನೆಯ ಬಲರಾಮ ದ್ವಾರದಿಂದ ಹೊರಬೀಳಲಿದ್ದು ಈ ಅದ್ಧೂರಿ ಮೆರವಣಿಗೆಯನ್ನು ಕಣ್ತುಂಬಿಕೊಳ್ಳಲು ಚಾಮರಾಜ ವೃತ್ತ, ಕೆ.ಆರ್.ವೃತ್ತ, ಸಯ್ಯಾಜಿರಾವ್ ರಸ್ತೆ ಮಾರ್ಗವಾಗಿ ಸಾಗಿ ಬನ್ನಿಮಂಟಪ ತಲುಪುವ ಮಾರ್ಗದುದ್ದಕ್ಕೂ ರಾಜಪಥದ ಅಕ್ಕಪಕ್ಕದಲ್ಲಿ  ಜನರು ಮರ ಮತ್ತು ಕಟ್ಟಡವೇರಿ ಕುಳಿತುಕೊಳ್ಳುತ್ತಾರೆ.

ಆದರೆ ಈ ಬಾರಿ ಜಿಲ್ಲಾಧಿಕಾರಿ ರಂದೀಪ್ ಅದಕ್ಕೆ ಕಡಿವಾಣ ಹಾಕಿದ್ದು, ಕೆಲವು ಕಟ್ಟಡಗಳು  ಈಗಾಗಲೇ ಶಿಥಿಲಗೊಂಡಿವೆ. ಅದರಿಂದ ಯಾರು ಕಟ್ಟಡವೇರದಂತೆ ಸೂಚನೆ ನೀಡಿದ್ದಾರೆ. ಮಹಾನಗರಪಾಲಿಕೆಗೆ ಈಗಾಗಲೇ ಶಿಥಿಲಗೊಂಡ ಕಟ್ಟಡಗಳ ಪಟ್ಟಿ ತಯಾರಿಸಲು ಪೊಲೀಸ್ ಅಧಿಕಾರಿಗಳು ಸೂಚನೆ ನೀಡಿದ್ದು, ಪಟ್ಟಿ ತಯಾರಿಸಲಾಗುತ್ತಿದೆ ಎನ್ನಲಾಗಿದೆ. ಒಟ್ಟಿನಲ್ಲಿ ಈ ಬಾರಿ ಜಂಬೂಸವಾರಿಯನ್ನು ರಸ್ತೆಯ ಅಕ್ಕಪಕ್ಕಗಳಲ್ಲಿಯೇ ನಿಂತು ವೀಕ್ಷಿಸಬೇಕಿದೆ.

Leave a Reply

comments

Related Articles

error: