ಮೈಸೂರು

ಕಾಡಾ ಕಚೇರಿಯಲ್ಲಿ ವಿವಿಧ ಇಲಾಖೆಗಳ ಅಧಿಕಾರಿಗಳ ಜೊತೆ ಸಭೆ ನಡೆಸಿದ ಶಾಸಕ ರಾಮದಾಸ್

ಮೈಸೂರು,ಫೆ.6:- ಶಾಸಕರಾದ ಎಸ್ ರಾಮದಾಸ್ ಅವರ ನೇತೃತ್ವದಲ್ಲಿ 19-02-21 ರ ಶುಕ್ರವಾರದಂದು ಹಮ್ಮಿಕೊಂಡಿರುವ ಉದ್ಯೋಗ ಮೇಳದ ಅಂಗವಾಗಿ ಇಂದು ಕಾಡಾ ಕಚೇರಿಯಲ್ಲಿ ವಿವಿಧ ಇಲಾಖೆಗಳ ಅಧಿಕಾರಿಗಳ ಜೊತೆ ಸಭೆ ನಡೆಯಿತು.

ಸಭೆಯನ್ನುದ್ದೇಶಿಸಿ ಮಾತನಾಡಿದ ಮಾನ್ಯ ಶಾಸಕರು ಫೆಬ್ರವರಿ 19 ರಂದು ಎಗ್ಸಿಬಿಷನ್ ಗ್ರೌಂಡ್ ನಲ್ಲಿ ಬೃಹತ್ ಉದ್ಯೋಗ ಮೇಲೆ ನಡೆಯುತ್ತಿದೆ ಇದರಲ್ಲಿ 10 ನೆ ತರಗತಿ ಫೇಲ್ ಆದ ವ್ಯಕ್ತಿಯಿಂದ ಹಿಡಿದು ಸ್ನಾತಕೋತ್ತರ ಪದವಿ ಓದಿದವರಿಗೂ ಉದ್ಯೋಗ ಮೇಳದಲ್ಲಿ ಅವಕಾಶ ದೊರೆಯುತ್ತದೆ. ಹೋಟೆಲ್ ಉದ್ಯಮ, ಗಾರ್ಮೆಂಟ್ಸ್ , ಎಂಜಿನಿಯರಿಂಗ್, ಎಲಕ್ಟ್ರಾನಿಕ್ಸ್, ಫಾರ್ಮಸಿ, ಸಾಫ್ಟ್ವೇರ್ ಕಂಪನಿಗಳು ಹೀಗೆ ಹತ್ತಾರು ಕಂಪನಿಗಳು ಈ ಉದ್ಯೋಗ ಮೇಳದಲ್ಲಿ ಭಾವಹಿಸಲಿವೆ. ಆದಷ್ಟು ಸ್ಥಳದಲ್ಲಿಯೇ ಆ ಅಭ್ಯರ್ಥಿಗೆ ಕೆಲಸ ನೀಡುವ ಕಾರ್ಯವಾಗಲಿದೆ. ಕೋವಿಡ್ ಹಾಗೂ ಇತರೆ ಕಾರಣದಿಂದ ಸಾಕಷ್ಟು ಮಂದಿಗೆ ಕೆಲಸ ಇಲ್ಲದಂತಾಗಿದ್ದು ಅಂಥವರಿಗೆ ಈ ಉದ್ಯೋಗ ಮೇಳ ಆಶಾದಾಯಕವಾಗಿ ಪರಿಣಮಿಸಲಿದೆ. ಆದ್ದರಿಂದ ಆದಷ್ಟು ಜನರು ಉದ್ಯೋಗ ಮೇಳದಲ್ಲಿ ಬಾಗವಹಿಸಬೇಕೆಂದು ಹೇಳಿದರು.
ಸಭೆಯಲ್ಲಿ ಹಿರಿಯ ಕಾರ್ಮಿಕ ಇಲಾಖೆಯ ನಿರೀಕ್ಷಕರಾದ ರವಿ, ನಿಖಿಲ್ ಚಂದ್ರ, ಶಶಿಧರ್ . ಉದ್ಯಮ ವಿನಿಮಯ ಅಧಿಕಾರಿಗಳಾದ ರಾಣಿ , ಝುಲ್ ಫಿಕರ್, ಕೌಶಲ್ಯಾಭಿವೃದ್ಧಿಯ ಶಿವಣ್ಣ , ಫ್ಯಾಕ್ಟರಿ & ಬಾಯ್ಲರ್ ಇಲಾಖೆಯ ರಮೇಶ್, ಗುತ್ತಿಗೆದಾರರ ಸಂಘದ ಅಧ್ಯಕ್ಷರಾದ ಜಗದೀಶ್ , ಜಿ.ಎಸ್.ಎಸ್ ನ ಶ್ರೀಹರಿ ಅವರು ಹಾಜರಿದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: