ಕರ್ನಾಟಕ

ಮಾಲವನ್ ದುರಂತ, ಮೂವರ ಆರೋಗ್ಯದಲ್ಲಿ ಚೇತರಿಕೆ

ಬೆಳಗಾವಿ: ಮಹಾರಾಷ್ಟ್ರದ ಮಾಲವನ್ ಬೀಚ್‍ನಲ್ಲಿ ಈಜಲು ಹೋಗಿ ಮೃತಪಟ್ಟ ಎಂಟು ಜನ ವಿದ್ಯಾರ್ಥಿಗಳ ಅಂತ್ಯಸಂಸ್ಕಾರ ಭಾನುವಾರ ನಡೆಯಿತು. ಶನಿವಾರ ಮಧ್ಯರಾತ್ರಿ ಮೂವರ ಅಂತ್ಯಕ್ರಿಯೆ ನಡೆದರೆ ಭಾನುವಾರ ಬೆಳಿಗ್ಗೆ ಐದು ಜನ ಮೃತರ ಅಂತ್ಯಕ್ರಿಯೆ ನಡೆಯಿತು.

ಮಾಜಿ ಮಹಾಪೌರ ವಿಜಯ ಮೋರೆ, ಶಿವಾಜಿ ಸುಂಠಕರ ಮತ್ತು ನಗರ ಸೇವಕ ಬಾಬುಲಾಲ ಮುಜಾವರ ಅವರು ದುರಂತ ಸಂಭವಿಸಿದ ಬಳಿಕ ಮಾಲವನ್ ಬೀಚ್‍ಗೆ ತೆರಳಿ ಮೃತ ವಿದ್ಯಾರ್ಥಿಗಳ ಮರಣೋತ್ತರ ಪರಿಕ್ಷೆ ನಡೆದ ಬಳಿಕ ನಾಲ್ಕು ಆ್ಯಂಬುಲೆನ್ಸ್‍ಗಳಲ್ಲಿ ಎಂಟು ಶವಗಳನ್ನು ಬೆಳಗಾವಿಗೆ ಶನಿವಾರ ಮಧ್ಯರಾತ್ರಿ ತಲುಪಿಸಿದ್ದರು.

ನೀರಿನಲ್ಲಿ ಒಟ್ಟು ಹನ್ನೊಂದು ಜನ ಈಜಲು ಹೋಗಿದ್ದರು. ಮೂರು ಜನ ವಿಧ್ಯಾರ್ಥಿಗಳನ್ನು ರಕ್ಷಿಸಲಾಗಿತ್ತು. ಮೂವರ ಪರಿಸ್ಥಿತಿ ಚಿಂತಾಜನಕವಾಗಿತ್ತು. ಆದರೆ ಭಾನುವಾರ ಸಂಜೆ ಹೊತ್ತಿಗೆ ಮೂವರ ಆರೋಗ್ಯ ಸ್ಥಿತಿ ಸುಧಾರಣೆ ಆಗಿದೆ.

ಬೆಳಗಾವಿಯ ಮರಾಠಾ ಮಂಡಳ ಎಂಜಿನಿಯರಿಂಗ್‌ ಕಾಲೇಜಿನ ಮೂವರು ವಿದ್ಯಾರ್ಥಿಗಳ ಆರೋಗ್ಯ ಸ್ಥಿತಿ ಸುಧಾರಿಸಿದ್ದು, ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.

ಅಧ್ಯಯನ ಪ್ರವಾಸಕ್ಕೆಂದು ಪುಣೆಗೆ ತೆರಳಿ, ಬೆಳಗಾವಿಗೆ ವಾಪಸ್‌ ಬರುವಾಗ ಮಾಲ್ವಣ ಬಳಿಯ ವಾಯರಿ ಬೀಚ್‌ಗೆ ವಿದ್ಯಾರ್ಥಿಗಳ ತಂಡವು ತೆರಳಿತ್ತು. ಸಮುದ್ರದಲ್ಲಿ ಈಜಲು 11 ವಿದ್ಯಾರ್ಥಿಗಳು ತೆರಳಿದ್ದರು. ಎಂಟು ವಿದ್ಯಾರ್ಥಿಗಳು ಸಾವನ್ನಪ್ಪಿದ್ದರೆ, ಇನ್ನುಳಿದ ವಿದ್ಯಾರ್ಥಿ ಸಂಕೇತ ಗಾಡವಿ ಹಾಗೂ ವಿದ್ಯಾರ್ಥಿನಿಯರಾದ ಅನಿತಾ ಹೊಳ್ಳಲ್ಲಿ ಮತ್ತು ಆಕಾಂಕ್ಷಾ ಘಾಟಗೆ ಅವರನ್ನು ಸ್ಥಳೀಯರು ರಕ್ಷಿಸಿದ್ದರು. ಅಸ್ವಸ್ಥಗೊಂಡಿದ್ದ ಇವರನ್ನು ಸಿಂಧುದುರ್ಗ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಮೂವರ ಆರೋಗ್ಯದಲ್ಲಿ ಚೇತರಿಕೆಯಾಗಿ ಮೂವರು ಪ್ರಾಣಾಪಾಯದಿಂದ ಪಾರಾಗಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ.

ಒಟ್ಟು ನಲವತ್ತು ಜನ ವಿಧ್ಯಾರ್ಥಿಗಳಲ್ಲಿ 32 ಜನ ವಿದ್ಯಾರ್ಥಿಗಳು ಸುರಕ್ಷಿತವಾಗಿ ಬೆಳಗಾವಿಗೆ ತೆರಳಿದ್ದಾರೆ.

(CT)

Leave a Reply

comments

Related Articles

error: