ಕರ್ನಾಟಕಪ್ರಮುಖ ಸುದ್ದಿ

ಹಾಸನ ಜಿಲ್ಲೆ ಅರಕಲಗೂಡು ಮೂಲದ ಯೋಧ ಬಿ.ಆರ್. ರಾಕೇಶ್ ಅನಾರೋಗ್ಯದಿಂದ ನಿಧನ

ರಾಜ್ಯ( ಹಾಸನ)ಫೆ.8:- ಹಾಸನ ಜಿಲ್ಲೆ ಅರಕಲಗೂಡು ಮೂಲದ ಯೋಧ ಬಿ.ಆರ್. ರಾಕೇಶ್ ಅನಾರೋಗ್ಯದಿಂದಾಗಿ ಹಿಮಾಚಲ ಪ್ರದೇಶದಲ್ಲಿ ನಿಧನರಾಗಿದ್ದಾರೆ.

ಅವರಿಗೆ ಕೇವಲ 23ವರ್ಷ ವಯಸ್ಸಾಗಿತ್ತು. ಅರಕಲಗೂಡು ಪಟ್ಟಣ ಪಂಚಾಯತ್ ನ ನೌಕರರಾದ ಶಿವಮ್ಮ, ರಾಜು ದಂಪತಿಯ ಪುತ್ರರಾಗಿದ್ದ ಇವರು ಹಿಮಾಲಯದ ತಪ್ಪಲ ರಾಜ್ಯದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು.

ಹಾಸನದ ಎನ್.ಡಿ.ಆರ್.ಕೆ. ಕಾಲೇಜಿನಲ್ಲಿ ಪದವಿ ವ್ಯಾಸಂಗ ಮಾಡುವಾಗಲೇ ಮೂರು ವರ್ಷದ ಹಿಂದೆ ಸೇನೆ ಸೇರಿದ್ದ ಅವರು ಕಳೆದ ಎರಡು ತಿಂಗಳ ಹಿಂದೆ ಅನಾರೋಗ್ಯಕ್ಕೀಡಾಗಿದ್ದರು. ಅವರಿಗೆ ಸೇನಾ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಚಿಕಿತ್ಸೆ ಫಲಿಸದೆ ಇಹಲೋಕ ತ್ಯಜಿಸಿದ್ದಾರೆ.

ಪುತ್ರನ ಮರಣದಿಂದ ರಾಕೇಶ್ ಕುಟುಂಬದಲ್ಲಿ ಶೋಕ ಮಡುಗಟ್ಟಿದೆ. ಯೋಧನ ಪಾರ್ಥಿವ ಶರೀರ ಇಂದು ಬೆಳಿಗ್ಗೆ ತವರಿಗೆ ಆಗಮಿಸುವ ನಿರೀಕ್ಷೆ ಇದೆ.(ಕೆ.ಎಸ್,ಎಸ್.ಎಚ್)

Leave a Reply

comments

Related Articles

error: