ದೇಶಪ್ರಮುಖ ಸುದ್ದಿ

ಉಗ್ರ  ಹಫೀಜ್‌ ಸಯೀದ್‌ ವಿರುದ್ಧ ಜಾಮೀನು ರಹಿತ ಬಂಧನ ವಾರೆಂಟ್‌

ದೇಶ(ನವದೆಹಲಿ)ಫೆ.8:- ದೆಹಲಿ ಹೈಕೋರ್ಟ್ 26/11 ಮುಂಬೈ ದಾಳಿ ಮಾಸ್ಟರ್‌ ಮೈಂಡ್‌, ಪಾಕ್‌ನ ಲಷ್ಕರ್‌ ಇ- ತೊಯ್ಬಾ ಉಗ್ರ  ಹಫೀಜ್‌ ಸಯೀದ್‌ ವಿರುದ್ಧ ಕಾಶ್ಮೀರ ಕಣಿವೆಯಲ್ಲಿ ಉಗ್ರರಿಗೆ ಆರ್ಥಿಕ ನೆರವು ನೀಡಿದ ಆರೋಪದ ಹಿನ್ನೆಲೆಯಲ್ಲಿ ಜಾಮೀನು ರಹಿತ ಬಂಧನ ವಾರೆಂಟ್‌ ಹೊರಡಿಸಿದೆ.

ಎನ್‌ಐಎ ಮೋಸ್ಟ್‌ ವಾಂಟೆಡ್‌ ಲಿಸ್ಟ್ ‌ನಲ್ಲಿರುವ ಹಫೀಜ್‌ನನ್ನು ವಿಶ್ವಸಂಸ್ಥೆ ಕೂಡ ಜಾಗತಿಕ ಉಗ್ರ ಎಂದು ಘೋಷಿಸಿತ್ತು. ಹಫೀಜ್‌ ಜತೆಗೆ ಮೂವರು ಸಹ ಆರೋಪಿಗಳಾದ ಕಾಶ್ಮೀರಿ ಉದ್ಯಮಿ ಝಾಹೂರ್‌ ಅಹ್ಮದ್‌ ಶಾ ವತಾಲಿ, ಪ್ರತ್ಯೇಕವಾದಿ ಅಲ್ತಾಫ್ ಅಹ್ಮದ್‌ ಶಾ, ಯುಎಇ ಉದ್ಯಮಿ ನವಾಲ್‌ ಕಿಶೋರ್‌ ಕಪೂರ್‌ಗೂ ಬಂಧನದ ವಾರೆಂಟ್‌ ಜಾರಿಗೊಳಿಸಲಾಗಿದೆ.

ಇವರೆಲ್ಲರೂ ಭಾರತದಲ್ಲಿ ಉಗ್ರ ಚಟುವಟಿಕೆಗೆ ಆರ್ಥಿಕ ನೆರವು ನೀಡಿದ್ದರು ಎನ್ನಲಾಗಿದೆ. (ಏಜೆನ್ಸೀಸ್,ಎಸ್.ಎಚ್)

Leave a Reply

comments

Related Articles

error: