ಕರ್ನಾಟಕ

ಉತ್ತಮ ನಿರ್ವಹಣೆ, ಸ್ವಚ್ಛತೆಗೆ ಪ್ರಶಸ್ತಿ ಪಡೆದ ಬೆಳಗಾವಿ ರೈಲು ನಿಲ್ದಾಣ

ಬೆಳಗಾವಿ: ನಗರ ರೈಲ್ವೆ ಸ್ಟೇಶನ್ ಉತ್ತಮ ನಿರ್ವಹಣೆ, ಸ್ವಚ್ಛತೆಗಾಗಿ 2017 ನೇ ಸಾಲಿನ ರೈಲ್ವೆ ಅವಾರ್ಡ್ ಬೆಳಗಾವಿಗೆ ಸಿಕ್ಕಿದೆ.
62 ರೈಲ್ವೆ ಸಪ್ತಾಹದ ಸಂದರ್ಭ ಹುಬ್ಬಳ್ಳಿಯ ವಿಭಾಗೀಯ ಕಚೇರಿಯಲ್ಲಿ ಮುಖ್ಯ ನಿರ್ವಹಣಾ ವ್ಯವಸ್ಥಾಪಕರು ಬೆಳಗಾವಿ ರೈಲ್ವೆ ಪ್ರಬಂಧಕ ಎಸ್. ಸುರೇಶ ಅವರಿಗೆ ಪ್ರಶಸ್ತಿ ನೀಡಿದ್ದಾರೆ. ಪ್ರಶಸ್ತಿಯು ನಗದು, ಪ್ರತಿಭಾ ಪತ್ರ ಮತ್ತು ರೋಲಿಂಗ್ ಶೀಲ್ಡ್ ಹೊಂದಿದ್ದು ಹುಬ್ಬಳ್ಳಿ ವಿಭಾಗದಲ್ಲಿ ಬೆಳಗಾವಿ ಉತ್ತಮ ನಿರ್ವಹಣಾ ನಿಲ್ದಾಣವಾಗಿ ಗುರುತಿಸಿಕೊಂಡಿದೆ.
ರೈಲು ನಿಲ್ದಾಣ ನಿರ್ವಹಣೆ, ಸ್ವಚ್ಛತೆ, ಅಹಿತಕರ ಘಟನೆಗಳಿಗೆ ಅವಕಾಶವಿಲ್ಲ ಮತ್ತು ಪ್ರಯಾಣಿಕರೊಂದಿಗೆ ಸೌಜನ್ಯದಿಂದ ವರ್ತಿಸುವ ಸಿಬ್ಬಂದಿಯಿಂದ ಈ ಪ್ರಶಸ್ತಿ ಲಭಿಸಿದೆ. ಪರಿಣಾಮಕಾರಿ ಮಾನಿಟರಿಂಗ್ ಮಾಡುವುದು ಪ್ರಬಂಧಕರ ಮುಖ್ಯ ಜವಾಬ್ದಾರಿ ಅದನ್ನು ನಾನು ನಿರ್ವಹಿಸಿದ್ದೇನೆ ಎಂದು ಎಸ್. ಸುರೇಶ ಪ್ರತಿಕ್ರಿಯಿಸಿದ್ದಾರೆ.

(CT)

Leave a Reply

comments

Related Articles

error: