
ದೇಶಪ್ರಮುಖ ಸುದ್ದಿ
ಉತ್ತರಾಖಂಡ ಹಿಮ ಪ್ರವಾಹ : 26ಮೃತದೇಹ ಪತ್ತೆ; ಯುಪಿ 55 ಕಾರ್ಮಿಕರು ನಾಪತ್ತೆ
ದೇಶ( ಲಖನೌ)ಫೆ.9:- ಉತ್ತರಾಖಂಡದಲ್ಲಿ ಸಂಭವಿಸಿದ ಹಿಮ ಸ್ಫೋಟದಲ್ಲಿ ಇದುವೆರೆಗೂ ಸುಮಾರು 26 ಮೃತದೇಹಗಳು ಪತ್ತೆಯಾಗಿವೆ. ತಪೋವನ್ ವಿದ್ಯುತ್ ಯೋಜನೆ ಸ್ಥಳದಲ್ಲಿ ಉತ್ತರ ಪ್ರದೇಶದ ಸುಮಾರು 55 ಕಾರ್ಮಿಕರು ನಾಪತ್ತೆಯಾಗಿದ್ದಾರೆ.
ತಪೋವನ್ ವಿದ್ಯುತ್ ಸ್ಥಾವರದ ಬಳಿಯ ಸುರಂಗದಲ್ಲಿ ಪವರ್ ಪ್ಲಾಂಟ್ ನ ಹಿರಿಯ ಅಧಿಕಾರಿಗಳು, ಇಬ್ಬರು ಪೊಲೀಸ್ ಸಿಬ್ಬಂದಿ ಹಾಗೂ ಕಾರ್ಮಿಕರು ಸೇರಿ 171 ಮಂದಿ ನಾಪತ್ತೆಯಾಗಿದ್ದಾರೆ. ಅಲ್ಲದೆ ಉತ್ತರ ಪ್ರದೇಶದ 55 ಕಾರ್ಮಿಕರು ನಾಪತ್ತೆಯಾಗಿದ್ದು ಯೋಗಿ ಸರ್ಕಾರ ತುರ್ತು ನಿಯಂತ್ರಣ ಕೊಠಡಿ ಸ್ಥಾಪಿಸಿದೆ. 1070 ಮತ್ತು 9454441036 ಎಂಬ ಎರಡು ಸಹಾಯವಾಣಿ ಸಂಖ್ಯೆಯನ್ನು ಬಿಡುಗಡೆ ಮಾಡಿದೆ.
ರಕ್ಷಣಾ ಮತ್ತು ಪರಿಹಾರ ಕಾರ್ಯಾಚರಣೆ ನಡೆಸಲು ಉತ್ತರ ಪ್ರದೇಶ ಉತ್ತರಾಖಂಡಕ್ಕೆ ಸಹಾಯಹಸ್ತ ಚಾಚಿದೆ. (ಏಜೆನ್ಸೀಸ್,ಎಸ್.ಎಚ್)