ಮೈಸೂರು

ಶಾಂತರಾಜ್ ವಿರುದ್ಧದ ಪ್ರಕರಣ ಹಿಂಪಡೆದು ಕ್ಷಮೆ ಯಾಚಿಸಬೇಕು : ದಲಿತ ವಿದ್ಯಾರ್ಥಿ ಒಕ್ಕೂಟ ಆಗ್ರಹ

ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ಸಚಿವ ತನ್ವೀರ್ ಸೇಠ್ ಅವರ ದಲಿತ  ವಿರೋಧಿ ನೀತಿಯನ್ನು ದಲಿತ ವಿದ್ಯಾರ್ಥಿ ಒಕ್ಕೂಟ ಖಂಡಿಸಿ,ಸಚಿವರು ಹಿಂದುಳಿದ ವರ್ಗಗಳ ಎಸ್ಸಿ,ಎಸ್ಟಿ ನೌಕರರ ಪರಿಷತ್ ಅಧ್ಯಕ್ಷ ಹಾಗೂ ದಲಿತ ವೆಲ್ ಫೇರ್ ಟ್ರಸ್ಟ್ ಅಧ್ಯಕ್ಷ ಶಾಂತರಾಜ್ ವಿರುದ್ಧ ನೀಡಿರುವ ದೂರನ್ನು ಹಿಂಪಡೆದು ಕ್ಷಮೆಯಾಚಿಸಬೇಕೆಂದು ಆಗ್ರಹಿಸಿದರು.

ಮೈಸೂರು ಪತ್ರಕರ್ತರ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ  ಒಕ್ಕೂಟದ ಗೌರವಾಧ್ಯಕ್ಷ ಮಹೇಶ್ ಸೋಸ್ಲೆ ಮಾತನಾಡಿ ಸಚಿವರು ಹಿಂದುಳಿದ ವರ್ಗಗಳ ನಾಯಕ ಶಾಂತರಾಜ್ ಅವರ ವಿರುದ್ಧ ಸುಳ್ಳು ಮೊಕದ್ದಮೆಯನ್ನು ದಾಖಲಿಸಿದ್ದು ಇದನ್ನು ಸಂಘಟನೆಯು ಉಗ್ರವಾಗಿ ಖಂಡಿಸುವುದು ಎಂದು ತಿಳಿಸಿದರು. ಪಿಯು ನೇಮಕಾತಿಯಲ್ಲಿ ಸಾಮಾನ್ಯ ವರ್ಗಗಳಿಗೆ ನೀಡಿರುವ ಕನಿಷ್ಠ 55%ರಷ್ಟನ್ನು ಪರಿಶಿಷ್ಠರಿಗೆ 5%ರಷ್ಟು ಸಡಿಲಿಕೆಗೊಳಿಸಬೇಕೆಂದು ಮನವಿ ಸಲ್ಲಿಸಲು ತೆರಳಿದಾಗ ಶಾಂತರಾಜ್ ಅವರನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿ ಸುಳ್ಳು ಪ್ರಕರಣ ದಾಖಲಿಸಿರುವುದು ಸಚಿವರ ದಲಿತ ವಿರೋಧಿ ನೀತಿಯನ್ನು ಪ್ರಚುರಪಡಿಸಿದಂತಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಶಾಂತರಾಜ್ ಭಯೋತ್ಪಾದಕನಲ್ಲ, ಉಗ್ರಗಾಮಿಯಲ್ಲ ಅಂತಹವರ ವಿರುದ್ಧ ಸಚಿವರು ಸುಳ್ಳು ಪ್ರಕರಣವನ್ನು ಹೂಡಿರುವುದು ಖಂಡನೀಯ, ಆದ್ದರಿಂದ ಸಚಿವರು  ಶಾಂತರಾಜ್ ವಿರುದ್ಧದ ಕೇಸ್ ನ್ನು ಹಿಂಪಡೆಯಬೇಕು ಹಾಗೂ ಬೇಷರತ್ ಕ್ಷಮೆ ಯಾಚಿಸಬೇಕು. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಸಚಿವರ ಮನೆ ಮುಂದೆ ಧರಣಿ ಸತ್ಯಾಗ್ರಹ ನಡೆಸಲಾಗುವುದು ಎಂದು ಎಚ್ಚರಿಸಿದರು.

ಸುದ್ದಿಗೋಷ್ಠಿಯಲ್ಲಿ ಅಧ್ಯಕ್ಷ ನಟರಾಜು ಶಿವಣ್ಣ, ಉಪಾಧ್ಯಕ್ಷ ವಿನೋದ್ ಎಸ್.ದಲಿತ್  ಉಪಸ್ಥಿತರಿದ್ದರು. (ಕೆ.ಎಂ.ಆರ್-ಎಸ್.ಎಚ್)

 

 

Leave a Reply

comments

Related Articles

error: