ಮೈಸೂರು

ರಸ್ತೆ ಕಾಮಗಾರಿ : ಗುಣಮಟ್ಟಕ್ಕೆ ಒತ್ತು ನೀಡುವಂತೆ ಹೆಚ್.ವಿ.ರಾಜೀವ್ ಸೂಚನೆ

ಮೈಸೂರು,ಫೆ.10:- ಮೈಸೂರು ನಗರದ ಕ್ಯಾತಮಾರನ ಹಳ್ಳಿ ಹುಡ್ಕೊ ಬಡಾವಣೆಯ 3ನೇ ಮತ್ತು 4ನೇ ಹಂತದಲ್ಲಿ ಬರುವ ರಸ್ತೆಗಳಲ್ಲಿಗೆ ಮರು ಡಾಂಬರೀಕರಣ ಕಾಮಗಾರಿಯನ್ನು ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ವತಿಯಿಂದ ಕೈಗೆತ್ತಿಕೊಳ್ಳಲಾಗುತ್ತಿದೆ.
ಈ ಕಾಮಗಾರಿಯನ್ನು ಉತ್ತಮ ಗುಣಮಟ್ಟದಲ್ಲಿ ಕೈಗೊಳ್ಳುತ್ತಿರುವ ಬಗ್ಗೆ ಖಾತ್ರಿಪಡಿಸಿಕೊಳ್ಳಲು ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಹೆಚ್.ವಿ.ರಾಜೀವ್ ಅವರು ಖುದ್ದು ಕಾಮಗಾರಿಯ ಸ್ಥಳ ಪರಿಶೀಲನೆ ನಡೆಸಿದರು. ಗುತ್ತಿಗೆದಾರರಿಗೆ ಕಾಮಗಾರಿಯ ಗುಣಮಟ್ಟವನ್ನು ಕಾಯ್ದುಕೊಂಡು ನಿರ್ವಹಿಸಲು ಸೂಚಿಸಿದರು.
ಈ ಸಂದರ್ಭದಲ್ಲಿ ಪ್ರಾಧಿಕಾರದ ಕಾರ್ಯಪಾಲಕ ಅಭಿಯಂತರಾದ ಸತೀಶ್ ಮತ್ತು ವಲಯ ಅಧಿಕಾರಿಯವರಾದ ಶಿವಣ್ಣ, ಸಹಾಯಕ ಇಂಜಿನಿಯರ್ ವೇಣುಗೋಪಾಲ್ ಹಾಗೂ ಮಾಜಿ ಉಪ ಮಹಾಪೌರರಾದ ಶಾಂತಕುಮಾರಿ ಹಾಜರಿದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: