ಮೈಸೂರು

ಮಡಿವಾಳರ ಸಂಘದ ಸದಸ್ಯತ್ವ ನೋಂದಣಿ ಅಭಿಯಾನ

ಕರ್ನಾಟಕ ರಾಜ್ಯ ಮಡಿವಾಳರ ಸಂಘದ ಸದಸ್ಯತ್ವ ನೋಂದಣಿ ಅಭಿಯಾನವನ್ನು ಕೈಗೊಳ್ಳಲಾಗುತ್ತಿದ್ದು ಸಮಾಜದ ಬಾಂಧವರು ಇದರ ಸದುಪಯೋಗಪಡಿಸಿಕೊಳ್ಳಿ ಎಂದು ಮೈಸೂರು ಮಡಿವಾಳ ಯೂತ್ ಆರ್ಗನೈಜೇಷನ್ ಅಧ್ಯಕ್ಷ ರವಿನಂದನ್ ತಿಳಿಸಿದರು.

ಮೈಸೂರು ಪತ್ರಕರ್ತರ ಭವನದಲ್ಲಿಂದು ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಏ.23 ರಿಂದ ಮೇ23ರವರೆಗೆ ರಾಜ್ಯ ಮಡಿವಾಳರ ಸಂಘ ಬೆಂಗಳೂರು ಹಾಗೂ ಮೈಸೂರು ಮಡಿವಾಳ ಯೂತ್ ಆರ್ಗನೈಜೇಷನ್ ಇವರ ಸಂಯುಕ್ತಾಶ್ರಯದಲ್ಲಿ ಒಂದು ತಿಂಗಳ ಕಾಲ ಸದಸ್ಯತ್ವ ಅಭಿಯಾನವನ್ನು ಹಮ್ಮಿಕೊಳ್ಳಲಾಗಿದೆ, ಈಗಾಗಲೇ 2ಸಾವಿರ ಮಂದಿ ಸದಸ್ಯತ್ವ ನೋಂದಣಿ ಮಾಡಿಕೊಂಡಿದ್ದು, ಸದಸ್ಯತ್ವಕ್ಕೆ ಯಾವುದೇ ಶುಲ್ಕವಿಲ್ಲ, ವಯಸ್ಸಿನ ಮಿತಿ ಇಲ್ಲ ಎಂದು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಕಾರ್ಯದರ್ಶಿ ನಾಗೇಶ್, ಉಪಾಧ್ಯಕ್ಷ ಸಿದ್ದೇಶ್, ಖಜಾಂಚಿ ಶಿವಕುಮಾರ್ ಹಾಗೂ ಸೋಮಶೇಖರ್  ಹಾಜರಿದ್ದರು. ಹೆಚ್ಚಿನ ಮಾಹಿತಿಗಾಗಿ ಮೊ.ಸಂ.  9342257373/9449323272/9731592555 ಸಂಪರ್ಕಿಸಬಹುದು. (ಕೆ.ಎಂ.ಆರ್-ಎಸ್.ಎಚ್)

Leave a Reply

comments

Related Articles

error: