ಸುದ್ದಿ ಸಂಕ್ಷಿಪ್ತ

ಉಚಿತ ಕೌಶಲ್ಯ ತರಬೇತಿಗೆ ಅರ್ಜಿ ಆಹ್ವಾನ

ಮೈಸೂರು,ಫೆ.11-ಕೇಂದ್ರ ಪ್ರವಾಸೋದ್ಯಮ ಸಚಿವಾಲಯ ಹಾಗೂ ಪ್ರವಾಸೋದ್ಯಮ ಇಲಾಖೆ ವತಿಯಿಂದ ಕೌಶಲ್ಯ ಅಭಿವೃದ್ದಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಯೋಜನೆಯಡಿಯಲ್ಲಿ ಹೋಟೆಲ್ ಮ್ಯಾನೇಜ್‍ಮೆಂಟ್ ವಿಭಾಗಗಳಲ್ಲಿ ಉಚಿತವಾಗಿ ಅಲ್ಪಾವಧಿ ತರಬೇತಿಗಳನ್ನು ಪ್ರಾರಂಭಿಸಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.

ಹೆಚ್ಚಿನ ಮಾಹಿತಿಗಾಗಿ ಫುಡ್ ಕ್ರಾಫ್ಟ್ ಇನ್ಸ್‍ಸ್ಟಿಟ್ಯೂಟ್, ದಸರಾ ವಸ್ತು ಪ್ರದರ್ಶನ ಆವರಣ, ದೊಡ್ಡಕೆರೆ ಮೈದಾನ, ಇಂದಿರಾನಗರಕ್ಕೆ ಭೇಟಿ ನೀಡಬಹುದು ಅಥವಾ ಮೊ.ಸಂ. 6362018821, ದೂ.ಸಂ.0821-2445388ಅನ್ನು ಸಂಪರ್ಕಿಸಬಹುದು ಎಂದು ಫುಡ್ ಕ್ರಾಫ್ಟ್ ಇನ್ಸ್‍ಸ್ಟಿಟ್ಯೂಟ್ ಪ್ರಾಂಶುಪಾಲರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. (ಎಂ.ಎನ್)

Leave a Reply

comments

Related Articles

error: