ಮೈಸೂರು

ನಾಳೆಯಿಂದ `ಕದಂಬ ರಂಗಹಬ್ಬ’: ನಾಟಕಗಳ ಪ್ರದರ್ಶನ

ಮೈಸೂರು,ಫೆ.11-ಕದಂಬ ರಂಗವೇದಿಕೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಫೆ.12 ರಿಂದ 14 ರವರೆಗೆ `ಕದಂಬ ರಂಗಹಬ್ಬ’ವನ್ನು ಹಮ್ಮಿಕೊಳ್ಳಲಾಗಿದೆ.

ನಾಳೆ ಸಂಜೆ 6.30ಕ್ಕೆ ರಾಮಕೃಷ್ಣ ನಗರದ ನೃಪತುಂಗ ಕನ್ನಡ ಶಾಲೆ ಆವರಣದಲ್ಲಿರುವ ರಮಾಗೋವಿಂದ ರಂಗಮಂದಿರದಲ್ಲಿ ನಾಟಕೋತ್ಸವಕ್ಕೆ ರಂಗಾಯಣದ ನಿರ್ದೇಶಕ ಅಡ್ಡಂಡ ಕಾರ್ಯಪ್ಪ ಅವರು ಚಾಲನೆ ನೀಡಲಿದ್ದಾರೆ.

`ಬೆಳಕಿನ ಅಂಗಡಿ’ ನಾಟಕದ ದೃಶ್ಯ

ಈ ವೇಳೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಎಚ್.ಚೆನ್ನಪ್ಪ, ರಂಗ ನಿರ್ದೇಶಕ ಪ್ರೊ.ಎಚ್.ಎಸ್.ಉಮೇಶ್, ಹಿರಿಯ ರಂಗಕರ್ಮಿ ಡಾ.ಎಚ್.ಎ.ಪಾರ್ಶ್ವನಾಥ್, ಕದಂಬ ರಂಗವೇದಿಕೆಅಧ್ಯಕ್ಷ ರಾಜಶೇಖರ ಕದಂಬ ಉಪಸ್ಥಿತರಿರಲಿದ್ದಾರೆ.

ವೇದಿಕೆ ಕಾರ್ಯಕ್ರಮದ ಬಳಿಕ `ಕಾರ್ಪೊರೇಟರ್ ಕೊಟ್ರೇಗೌಡ’ ನಗೆ ನಾಟಕ ಪ್ರದರ್ಶನಗೊಳ್ಳಲಿದೆ. ಮಹದೇವ ಹಡಪದ ನಿರ್ದೇಶನದ ನಾಟಕವನ್ನು ಧಾರವಾಡದ ಆಟಮಾಟ ತಂಡ ಪ್ರಸ್ತುತ ಪಡಿಸಲಿದೆ. ಫೆ.13 ರಂದು ಸಂಜೆ 6.30ಕ್ಕೆ `ಬೆಳಕಿನ ಅಂಗಡಿ’ ನಾಟಕ  ಪ್ರದರ್ಶನಗೊಳ್ಳಲಿದ್ದು, ಡಾ. ಸುಷ್ಮಾ ಎಸ್.ವಿ ನಿರ್ದೇಶನದ ಬೇಲೂರು ರಘುನಂದನ್ ರಚನೆಯ ನಾಟಕವನ್ನು ಬೆಂಗಳೂರಿನ ಥೇಮಾ ತಂಡ ಪ್ರಸ್ತುತ ಪಡಿಸಲಿದೆ. ಫೆ.14 ರಂದು ಸಂಜೆ 6.30ಕ್ಕೆ ದಿವ್ಯಧನು ನಾಟಕ ಪ್ರದರ್ಶನಗೊಳ್ಳಲಿದೆ. ನಾಟಕದ ಮೂಲ ಸಾಫೋಕ್ಲಿಸ್. ಇದನ್ನು ಕನ್ನಡಕ್ಕೆ ಡಾ. ಸಿಪಿಕೆ ಅವರು ಭಾಷಾಂತರಿಸಿದ್ದಾರೆ. ಈ ನಾಟಕವನ್ನು ಹೆಚ್.ಎಸ್. ಉಮೇಶ್ ನಿರ್ದೇಶಿಸಿದ್ದು, ಮೈಸೂರಿನ ಕದಂಬ ರಂಗವೇದಿಕೆ ಸಾದರಪಡಿಸಲಿದೆ. ನಾಟಕಕ್ಕೆ ಉಚಿತ ಪ್ರವೇಶವಿರಲಿದೆ. (ಎಂ.ಎನ್)

Leave a Reply

comments

Related Articles

error: