ಕ್ರೀಡೆಪ್ರಮುಖ ಸುದ್ದಿ

ವಿಜಯ್ ಹಜಾರೆ ಟ್ರೋಫಿ: ಹನುಮಾ ವಿಹಾರಿ ಆಂಧ್ರಪ್ರದೇಶದ ಕ್ಯಾಪ್ಟನ್; ರಿಕಿ ಭುಯಿ ವೈಸ್ ಕ್ಯಾಪ್ಟನ್

ದೇಶ(ನವದೆಹಲಿ)ಫೆ.12:- ಈ ತಿಂಗಳು ನಡೆಯಲಿರುವ ವಿಜಯ್ ಹಜಾರೆ ಟ್ರೋಫಿಯಲ್ಲಿ ಭಾರತದ ಬ್ಯಾಟ್ಸ್ ‌ಮನ್ ಹನುಮಾ ವಿಹಾರಿ ಆಂಧ್ರಪ್ರದೇಶದ ನಾಯಕತ್ವ ವಹಿಸಲಿದ್ದು, ರಿಕಿ ಭುಯಿ ತಂಡದ ಉಪನಾಯಕನಾಗಿ ಕಾರ್ಯನಿರ್ವಹಿಸಲಿದ್ದಾರೆ.
ಆಂಧ್ರ ಕ್ರಿಕೆಟ್ ಸಂಘ (ಎಸಿಎ) ಗುರುವಾರ ಈ ಮಾಹಿತಿಯನ್ನು ನೀಡಿದೆ. ಕಳೆದ ತಿಂಗಳು ಆಸ್ಟ್ರೇಲಿಯಾ ವಿರುದ್ಧದ ಸಿಡ್ನಿ ಟೆಸ್ಟ್ ಪಂದ್ಯದಲ್ಲಿ ರವಿಚಂದ್ರನ್ ಅಶ್ವಿನ್ ಜೊತೆ ಡ್ರಾದಲ್ಲಿ ಪ್ರಮುಖ ಪಾತ್ರ ವಹಿಸಿದ್ದ ವಿಹಾರಿ, ಮಂಡಿರಜ್ಜು ಗಾಯದಿಂದಾಗಿ ಇಂಗ್ಲೆಂಡ್ ವಿರುದ್ಧದ ಮೊದಲ ಎರಡು ಟೆಸ್ಟ್ ಪಂದ್ಯಗಳಿಂದ ಹೊರಗುಳಿದಿದ್ದಾರೆ.
“ಹನುಮಾ ಶೀಘ್ರದಲ್ಲೇ ಚೇತರಿಸಿಕೊಳ್ಳುತ್ತಿದ್ದಾರೆ ಆದರೆ ಇನ್ನೂ ಸಂಪೂರ್ಣವಾಗಿ ಫಿಟ್ ಆಗಿಲ್ಲ. ಫೆಬ್ರವರಿ 20 ರೊಳಗೆ ಅವರು ಫಿಟ್ ಆಗದಿದ್ದರೆ, ಅವರ ಸ್ಥಾನಕ್ಕೆ ಮತ್ತೊಬ್ಬ ಆಟಗಾರ ನೇಮಕಗೊಳ್ಳುತ್ತಾನೆ.” ವಿಜಯ್ ಹಜಾರೆ ಟ್ರೋಫಿ ಫೆಬ್ರವರಿ 20 ರಿಂದ ನಡೆಯಲಿದೆ. ಆಂಧ್ರಪ್ರದೇಶ ತಂಡವು ತಮಿಳುನಾಡು, ಪಂಜಾಬ್, ಜಾರ್ಖಂಡ್, ಮಧ್ಯಪ್ರದೇಶ ಮತ್ತು ವಿದರ್ಭದೊಂದಿಗೆ ಗ್ರೂಪ್ ಬಿನಲ್ಲಿದೆ . ಈ ಗುಂಪಿನ ಎಲ್ಲಾ ಪಂದ್ಯಗಳು ಇಂದೋರ್‌ ನಲ್ಲಿ ನಡೆಯಲಿದೆ.
ಹನುಮಾ ವಿಹಾರಿ (ನಾಯಕ), ರಿಕಿ ಭುಯಿ (ಉಪನಾಯಕ), ಸಿ.ಎಚ್. ಶಶಿಕಾಂತ್, ಸಿಎಚ್ ಸ್ಟೀಫನ್, ಐ ಕಾರ್ತಿಕ್ ರಾಮನ್, ಎಸ್ ಧ್ರುವ್ ಕುಮಾರ್ ರೆಡ್ಡಿ, ಜಿ ಮನೀಶ್, ಡಿ ನರೇನ್ ರೆಡ್ಡಿ, ಕೆ ನಿತೀಶ್ ಕುಮಾರ್ ರೆಡ್ಡಿ, ಎಂ ಹರಿಶಂಕರ್ ರೆಡ್ಡಿ, ಎಸ್ ಚರಣ್ ಸಾಯಿತೇಜಾ, ಎಸ್ ತರುಣ್ (ವಿಕೆಟ್ ಕೀಪರ್) ಮತ್ತು ಬಿ ಸಂತೋಷ್ ಇದ್ದಾರೆ. (ಏಜೆನ್ಸೀಸ್,ಎಸ್.ಎಚ್)

Leave a Reply

comments

Related Articles

error: