ಮೈಸೂರು

ಆ್ಯಕ್ಟಿವಾ ಮತ್ತು ಕಂಪೌಂಡ್ ಗೆ ಗುದ್ದಿದ ಕಾರು

ಕಾರನ್ನು ತಿರುಗಿಸಲು ಯತ್ನಿಸಿದ ಕಾರು ಚಾಲಕನೋರ್ವ ಬ್ಯಾಂಕೊಂದರ ಮುಂದೆ ನಿಲ್ಲಿಸಿಡಲಾದ ಆ್ಯಕ್ಟಿವಾ ಗಾಡಿ ಹಾಗೂ ಮನೆಯೊಂದರ ಕಂಪೌಂಡ್ ಗೋಡೆಗೆ ಬಲವಾಗಿ ಗುದ್ದಿದ ಘಟನೆ ಮೈಸೂರಿನಲ್ಲಿ ನಡೆದಿದೆ.

ಇಲ್ಲಿನ ಸರಸ್ವತಿಪುರಂನ ಎಂಟನೇ ಮುಖ್ಯರಸ್ತೆಯಲ್ಲಿ ಕಾರನ್ನು ತಿರುವು ತೆಗೆದುಕೊಂಡ ಕುವೆಂಪುನಗರ ನಿವಾಸಿ ರವಿ ಎಂಬಾತ ಅಲ್ಲಿಯೇ ಎದುರಿನಲ್ಲಿ ವಿಜಯಾ ಬ್ಯಾಂಕ್ ಮುಂದೆ ನಿಲ್ಲಿಸಲಾದ ಆ್ಯಕ್ಟಿವಾ ಗಾಡಿಗೆ ಬಲವಾಗಿ ಗುದ್ದಿದ್ದಾನೆ. ಇದರಿಂದ ಗಾಡಿ ಜಖಂಗೊಂಡಿದೆ. ಅಷ್ಟೇ ಅಲ್ಲದೇ ಅಲ್ಲೇ ಪಕ್ಕದಲ್ಲಿದ್ದ ಮನೆಯ ಕಂಪೌಂಡ್ ಗೋಡೆಗೂ ಗುದ್ದಿದ್ದೂ ಗೋಡೆಯೂ ಹಾನಿಗೊಳಗಾಗಿದೆ. ಸ್ಥಳಕ್ಕೆ ಕುವೆಂಪುನಗರ ಸಂಚಾರಿ ಠಾಣೆಯ ಪೊಲೀಸರು ಆಗಮಿಸಿ ಎರಡು ವಾಹನಗಳನ್ನು ಠಾಣೆಗೆ ಕೊಂಡೊಯ್ದಿದ್ದಾರೆ. ರವಿ ಅಪ್ರಾಪ್ತ ಎಂಬ ಮಾತುಗಳು  ಸಾರ್ವಜನಿಕ ವಲಯದಲ್ಲಿ ಕೇಳಿ ಬಂದಿದ್ದು, ಮಕ್ಕಳ ಕೈಲಿ ಕಾರು ಕೊಟ್ಟು ಕಳುಹಿಸಬಾರದು ಎನ್ನುವ ಪರಿಜ್ಞಾನ ಮನೆಯವರಿಗಿಲ್ಲವೇ ಎಂಬ ಮಾತುಗಳು ಕೇಳಿ ಬಂದಿವೆ.  ಕಾರಿನ ಮೇಲೆ ಎಲ್ ಎಂದು ಸ್ಟಿಕ್ಕರ್ ಅಂಟಿಸಿರುವುದು ಆತ ಕಾರು ಚಾಲನೆಯನ್ನು ಕಲಿಯುತ್ತಿದ್ದನೇನೋ ಎಂದು ಹೇಳಲಾಗುತ್ತಿದೆ. ಚಾಲಕ ರವಿ ತುಂಬಾ ಗಾಬರಿಗೊಂಡಿರುವುದೇ ಈ ಅನುಮಾನಕ್ಕೆ ಕಾರಣವಾಗಿದೆ. ಘಟನೆಯಲ್ಲಿ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.  (ಕೆ.ಎಸ್-ಎಸ್.ಎಚ್)

Leave a Reply

comments

Related Articles

error: