
ಮೈಸೂರು
ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಪ್ರತಿಭಟನೆ
ಮೈಸೂರು,ಫೆ.12:- ಸೌತ್ ವೆಸ್ಟರ್ನ್ ರೈಲ್ವೆ ಮಜ್ದೂರ್ ಯೂನಿಯನ್ ಮೈಸೂರು ಕಛೇರಿ ಮುಂಭಾಗ ವಿಭಾಗೀಯ ಅದ್ಯಕ್ಷರಾದ ಸೋಮಶೇಖರ್ ಹಾಗೂ ವಿಭಾಗೀಯ ಕಾರ್ಯದರ್ಶಿ ಶಿವಪ್ರಕಾಶ್ ಅವರ ನೇತೃತ್ವದಲ್ಲಿ ಸುಮಾರು 70 ರಿಂದ 80 ಜನ ರೈಲ್ವೆ ನೌಕರರು ರೈಲ್ವೆ ವಿಭಾಗೀಯ ಕಛೇರಿ (DRM) ಆವರಣದಲ್ಲಿರುವ ರೈಲ್ವೆ ಬೋಗಿ ಆರೈಕೆ ಕೇಂದ್ರ ಬಳಿ ರೈಲ್ವೆ ಇಲಾಖೆಯಲ್ಲಿ ಈಗಾಗಲೇ ಅಪ್ರೆಂಟಿಸ್ ಮಾಡಿರುವವರಿಗೆ ಪ್ರತ್ಯೇಕವಾಗಿ ನೇಮಕಾತಿ ನಡೆಸಿ ಉದ್ಯೋಗ ನೀಡಬೇಕು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಪ್ರತಿಭಟನೆ ನಡೆಸಿದರು.
ಪ್ರತಿಭಟನಾಕಾರರು 2012 ರಿಂದ ಕೇಂದ್ರ ಸರ್ಕಾರ ಉದ್ಯೋಗ ನೀಡುವುದನ್ನು ನಿರಾಕರಿಸುತ್ತಾ ಬಂದಿದೆ. ಈ ಬಗ್ಗೆ ಕ್ರಮ ಕೈಗೊಳ್ಳಬೇಕು. ರೈಲ್ವೆ ಖಾಸಗೀಕರಣ ವಿರೋಧಿಸಿ, ತುಟ್ಟಿ ಭತ್ಯೆ ನೀಡುವಂತೆ, ನೂತನ ಪಿಂಚಣಿ ಯೋಜನೆ ಕೈ ಬಿಡುವಂತೆ ಒತ್ತಾಯಿಸಿ, ತಡೆಹಿಡಿದಿರುವ ಡಿಎ ಅನ್ನು 2020 ರಿಂದ ಇಲ್ಲಿಯವರೆಗೂ ನೀಡಬೇಕು. 78 ದಿನಗಳಿಂದ ದೆಹಲಿಯಲ್ಲಿ ರೈತರು ಪ್ರತಿಭಟನೆ ನಡೆಸುತ್ತಿದ್ದರೂ ಕೇಂದ್ರ ಸರ್ಕಾರ ಗಮನವನ್ನು ಹರಿಸುತ್ತಿಲ್ಲ. ಈ ದೇಶದ ಪ್ರಮುಖ ಆಸ್ತಿ ರೈತರು ಮತ್ತು ಕಾರ್ಮಿಕರು. ರೈತರ ಸ್ಥಿತಿ ನೋಡಿದರೆ ನಾವು ಅಂದರೆ ಕಾರ್ಮಿಕರ ಮುಂದಿನ ದಿನಗಳು ಬಹಳಷ್ಟು ಕಷ್ಟಗಳು ಇರುತ್ತದೆ. ಹೋರಾಟದ ಮೂಲಕ ನಾವು ಪ್ರತಿಯೊಂದು ಬೇಡಿಕೆಯನ್ನು ಈಡೇರಿಸಿಕೊಳ್ಳುವ ಕೆಲಸ ಮಾಡಬೇಕು. ಆದರೆ ಸರ್ಕಾರಗಳು ಈ ರೀತಿಯಲ್ಲಿ ಧ್ವನಿ ಎತ್ತುವ ಸಂಘಟನೆಗಳನ್ನು ಒಡೆಯುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿದೆ. ಈ ಬಗ್ಗೆ ನಾವು ಎಚ್ಚರಿಕೆಯಿಂದ ಇರಬೇಕು ಎಂದರು.
ಪ್ರತಿಭಟನೆಯಲ್ಲಿ ಆಲ್ತೂರು ಫರ್ನಾಂಡೀಸ್ , ಶ್ರೀಪತಿ , ಯೋಗೇಶ್ , ಮಂಜುನಾಥ , ಶಿವಕುಮಾರ್ ಹಾಗೂ ಇತರೆ ಮುಖಂಡರು ಇದ್ದರು. (ಕೆ.ಎಸ್,ಎಸ್.ಎಚ್)