ಮನರಂಜನೆ

ಲೋಹಿತ್ ನಿರ್ದೇಶನದ ಎರಡು ಸಿನಿಮಾಗಳಲ್ಲಿ ಪ್ರಿಯಾಂಕ ಉಪೇಂದ್ರ !

ಇತ್ತೀಚೆಗೆ ನಟಿ ಪ್ರಿಯಾಂಕಾ ಉಪೇಂದ್ರ ಬ್ಯುಸಿಯಾಗಿದ್ದಾರೆ.   ಕಾರಣ ಅವರಿಗೆ ಒಂದರ ಮೇಲೆ ಒಂದರಂತೆ ಬರುತ್ತಿರುವ ಆಫರ್ ಗಳು. ಹೌದು. ಪ್ರಿಯಾಂಕಾ ಸದ್ಯಕ್ಕೆ ಯೋಗಿ ದೇವಗಂಗೆ ನಿರ್ದೇಶನದ ಇನ್ನೂ ಹೆಸರಿಡದ ಚಿತ್ರದ ಚಿತ್ರೀಕರಣದಲ್ಲಿ ನಿರತರಾಗಿದ್ದಾರೆ. ಈ ಸಿನಿಮಾದಲ್ಲಿ ಉಪೇಂದ್ರ ಅವರ ಸೋದರಳಿಯ ನಿರಂಜನ್ ಪಾದಾರ್ಪಣೆ ಮಾಡಲಿದ್ದಾರೆ. ಪ್ರಿಯಾಂಕಾ ಪೊಲೀಸ್ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರಂತೆ.

ಇದರ ನಂತರ ‘ಮಮ್ಮಿ ಸೇವ್ ಮಿ’ ಸಿನಿಮಾ ನಿರ್ದೇಶಕ ಲೋಹಿತ್ ಅವರೊಂದಿಗೆ 2 ಸಿನಿಮಾಗಳಲ್ಲಿ ಬ್ಯುಸಿ ಆಗಲಿದ್ದಾರೆ. ಲೋಹಿತ್ ನಿರ್ದೇಶನದ ‘ಮಮ್ಮಿ ಸೇವ್ ಮಿ’   ಚಿತ್ರದ ಮೂಲಕ ಬಹಳ ವರ್ಷಗಳ ನಂತರ ಪ್ರಿಯಾಂಕಾ  ಚಿತ್ರರಂಗಕ್ಕೆ ಹಿಂತಿರುಗಿದ್ದರು. ಕನ್ನಡ ಚಿತ್ರರಂಗದಲ್ಲಿ ಸಾಕಷ್ಟು ಕುತೂಹಲ ಮೂಡಿಸಿದ್ದ ಈ ಸಿನಿಮಾ ತೆಲುಗಿನಲ್ಲಿ ‘ಚಿನ್ನಾರಿ’ ಯಾಗಿಯೂ ಬಿಡುಗಡೆಯಾಗಿತ್ತು. ಮುಂದೆ ಬರಲಿರುವ ಚಿತ್ರಗಳು ಸಹ ಕುತೂಹಲ ಮೂಡಿಸಿವೆ. (ಎಲ್.ಜಿ)

Leave a Reply

comments

Related Articles

error: